About Us

ಸೋದರಿ ನಿವೇದಿತಾ ಪ್ರತಿಷ್ಠಾನವು ಮಹಿಳಾ ಸಂಘಟನೆಯಾಗಿದ್ದು ಯುವಾ ಬ್ರಿಗೇಡ್ ನ ಸೋದರಿ ಸಂಸ್ಥೆಯಾಗಿದೆ. 2014 ರ ಸೆಪ್ಟೆಂಬರ್ 27 ರಂದು ಪ್ರಾರಂಭವಾಗಿ ಸೋದರಿ ನಿವೇದಿತಾರ ರಾಷ್ಟ್ಟೀಯತೆಯ ವಿಚಾರಗಳನ್ನು ಆದರ್ಶವಾಗಿರಿಸಿಕೊಂಡು ಆ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಲು ಮಹಿಳೆಯರನ್ನು ಪ್ರೇರೇಪಿಸಲಾಗುತ್ತಿದೆ. ಸಮಾಜದಲ್ಲಿ ಹೆಣ್ಣು ಎಂದರೆ ‘ಶಕ್ತಿ’ ಎನ್ನುವುದನ್ನು ಬಿತ್ತುವ ಮುಖ್ಯ ಉದ್ದೇಶದೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ಪ್ರತಿಷ್ಠಾನ ಕಾರ್ಯ ನಿರ್ವಹಿಸುತ್ತಿದೆ.

ರಾಷ್ಟ್ರೀಯತೆ, ಶಿಕ್ಷಣ, ಆಧ್ಯಾತ್ಮಿಕತೆ ಮತ್ತು ಮನುಕುಲಕ್ಕೆ ಸೇವೆ ನೀಡುವ ಮೂಲಕ ಸ್ವತಃ ತನ್ನನ್ನು ಸಮರ್ಪಿಸಿಕೊಂಡ ನಿವೇದಿತಾ ಅವರ ಜೀವನ ಮತ್ತು ಕಾರ್ಯಗಳನ್ನು ಅಧ್ಯಯನ ಮಾಡುವುದು.
ರೇಡಿಯೋ, ದೂರದರ್ಶನ ಮತ್ತು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಸೋದರಿ ನಿವೇದಿತಾ ಅವರ ಚಿಂತನೆಗಳು ಮತ್ತು ಸಿದ್ಧಾಂತಗಳನ್ನು ಸಮಾಜದಲ್ಲಿ ಹರಡುವುದು.
ಮಹಿಳಾ ಸ್ವಾವಲಂಬನೆಯ ಮುಖಾಂತರ ಆಕೆಯನ್ನು ಸಶಕ್ತಗೊಳಿಸುವುದು.
ನಿವೇದಿತಾರ ರಾಷ್ಟ್ರೀಯ ಶಿಕ್ಷಣದ ರೀತಿಗೆ ಒತ್ತು ನೀಡುವುದು ಹೀಗೆ ಭಿನ್ನ ಭಿನ್ನ ಕಾರ್ಯಗಳಲ್ಲಿ ಪ್ರತಿಷ್ಠಾನ ತನ್ನನ್ನು ತಾನು ತೊಡಗಿಸಿಕೊಂಡಿದೆ.

ತುಕ್ಕು ಹಿಡಿಯುವುದಕ್ಕಿಂತ ಸವೆದು ಹೋಗುವುದೇ ಲೇಸು ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಮಾಜವನ್ನು ಕಟ್ಟುವಲ್ಲಿ ಮಹಿಳೆಯರಿಗೆ ಪ್ರೇರಣೆ ನೀಡುವ ಕಾರ್ಯವನ್ನು ಸೋದರಿ ನಿವೇದಿತಾ ಪ್ರತಿಷ್ಠಾನ ಮಾಡುತ್ತಿದೆ.

snp vajra