Culture

ಡಿಜಿಟಲ್ ಮಾಧ್ಯಮದ ಮೂಲಕ ಪ್ರತಿ ತಿಂಗಳು ವಿವಿಧ ವಿಷಯಗಳ ಮಾಹಿತಿ, ಹಾಗೂ ಸಕಾರಾತ್ಮಕ ವಿಚಾರ ಹಂಚಿಕೆ.

ಒಂದು ತಿಂಗಳು ‘ಸ್ವರಾಜ್ಯಕ್ಕೆಮುಕ್ಕಾಲ್ನೂರು’ ಅಡಿಯಲ್ಲಿ ‘ಶಕ್ತಿಗಂಗೋತ್ರಿ’ ಎಂಬ ಹೆಸರಲ್ಲಿ ಅತ್ಯಂತ ಕೆಳಮಟ್ಟದಿಂದ ಬಂದು ಬದುಕಿನಲ್ಲಿ ಸಾಧನೆ ಮಾಡಿದ ಶಕ್ತಿ ಸ್ವರೂಪಿಣಿ‌ ಮಹಿಳೆಯರ ಪರಿಚಯ ಮಾಡಿಸಲಾಯಿತು. ಗಂಗೋತ್ರಿ ಎನ್ನೋದು ಮೂಲ ಸೂತ್ರ. ಈ ಶಕ್ತಿ ಸ್ವರೂಪಿಣಿ ಮಹಿಳೆಯರು ಎಲ್ಲರಿಗೂ ಪ್ರೇರಣೆ ನೀಡಲಿ ಮತ್ತು ಸಮಾಜದಲ್ಲಿ ಹೆಚ್ಚು ಹೆಚ್ಚು ಶಕ್ತಿ_ಗಂಗೋತ್ರಿಯರು ಸೃಜಿಸಲಿ ಎಂಬ ಉದ್ದೇಶವಾಗಿತ್ತು.

ಒಂದು ತಿಂಗಳ ಕಾಲ ತಾಯಿ ಭಾರತಿಯನ್ನು ಬ್ರಿಟೀಷರ ಬಂಧನದಿಂದ ಮುಕ್ತಗೊಳಿಸಲು ಹೋರಾಡಿದ, ಪ್ರಾಣಾರ್ಪಣೆಗೈದ ವೀರಾಂಗನೆಯರ ಕುರಿತು ‘ಸ್ವಾತಂತ್ರ್ಯ_ಲಕ್ಷ್ಮೀ’ ಎಂಬುದರಡಿಯಲ್ಲಿ ಪರಿಚಯಿಸಲಾಯಿತು. ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಾ ಬಂದಿರುವ ಈ ಸಂದರ್ಭದಲ್ಲಿ ಇಂತಹ ಸ್ವಾತಂತ್ರ್ಯ ಲಕ್ಷ್ಮಿಯರ ಜೀವನವನ್ನು ಅರಿತು, ಇತರರಿಗೂ ತಿಳಿಸುವುದು ಉದ್ದೇಶವಾಗಿತ್ತು.

ಒಂದು ತಿಂಗಳ ಕಾಲ ‘ನಿತ್ಯೋತ್ಸವ’ ಎಂಬ ಹೆಸರಿನಡಿ ಕರ್ನಾಟಕದ ವಿವಿಧ ಕಲಾ ಪ್ರಕಾರಗಳ ಮಾಹಿತಿ ಹಂಚಿಕೊಳ್ಳಲಾಯಿತು.
ಕರ್ನಾಟಕದ ಜಾನಪದ, ಸಾಂಸ್ಕೃತಿಕ ಆಚರಣೆಗಳ ವೈಶಿಷ್ಟ್ಯತೆಯ ಪರಿಚಯವನ್ನು ಮಾಡಿಕೊಡುವುದರ ಮೂಲಕ ಕನ್ನಡ ನಾಡಿನ ನಿತ್ಯೋತ್ಸವವನ್ನು ಆಚರಿಸಲಾಯಿತು.

ಒಂದು ತಿಂಗಳ ಕಾಲ ಪ್ರತಿನಿತ್ಯ ಹೇಳಬಹುದಾದ, ಕೆಲವು ಕಲಿಯಲೇಬೇಕಾದ ಶ್ಲೋಕಗಳನ್ನು ‘ಬದುಕಲು ಕಲಿಯೋಣ’ ಶೀರ್ಷಿಕೆಯಡಿ ಅರ್ಥಸಹಿತ ವಿವರಿಸುವ ಪ್ರಯತ್ನವನ್ನು ಮಾಡಲಾಯಿತು. ಮಕ್ಕಳು, ಆಸಕ್ತಿಯುಳ್ಳವರು ಅದನ್ನು ಕಲಿತು ಹೇಳುವಂತಾದರೆ ಪ್ರಯತ್ನ ಸಾರ್ಥಕ.

ಒಂದು ತಿಂಗಳ ಕಾಲ ಮನೆಯಲ್ಲಿ ಪ್ರತಿನಿತ್ಯ ಬಳಸುವ ಪದಾರ್ಥಗಳ ಉಪಯೋಗವನ್ನರಿಯಲು ‘ನಿರಾಮಯ’ ಎಂಬ ಹೆಸರಿನಡಿಯಲ್ಲಿ ಇದನ್ನು ಹಂಚಿಕೊಳ್ಳಲಾಯಿತು.

ಒಂದು ತಿಂಗಳ ಕಾಲ ‘ಗುಣನಿಧಿ ರಾಮ’ ಶೀರ್ಷಿಕೆಯಡಿ, ನಾವು ಆದರ್ಶವಾಗಿಸಿಕೊಳ್ಳಬೇಕಾದ ಶ್ರೀರಾಮನ ವಿಶೇಷ ಗುಣಗಳನ್ನು ಹಂಚಿಕೊಳ್ಳಲಾಯಿತು.ಆ ಮೂಲಕ ಶ್ರೀರಾಮನ ಶ್ರೇಷ್ಠತೆಯನ್ನೂ ಸಾರಲಾಯಿತು.

About the author

snp vajra

Add Comment

Click here to post a comment