Culture

ಪುಟ್ಟಗೌರಿಪೂಜೆ

ಹೆಣ್ಣು ಹುಟ್ಟುವುದೆಂದರೆ ಶಾಪವೆಂದು ನಂಬುವ ಕಾಲವೊಂದಿತ್ತು. ಆದರೂ ಇನ್ನು ಸಾಕಷ್ಟು ಮಂದಿ ಗಂಡಿಗಾಗಿ ಹಾತೊರೆಯುವ ನೆಪದಲ್ಲಿ ಮನೆಯ ಹೆಣ್ಣುಮಕ್ಕಳನ್ನು ಅತ್ಯಂತ ಕೆಟ್ಟಸ್ಥಿತಿಯಲ್ಲಿ ಕಾಣುವ ಸಂಪ್ರದಾಯವಿದೆ‌. ನವರಾತ್ರಿಯ ಒಂಭತ್ತು ದಿನ ದುರ್ಗೆಯನ್ನು ವಿವಿಧ ಸ್ವರೂಪಗಳಲ್ಲಿ ಆರಾಧಿಸಿ, ಮನೆಯಲ್ಲಿರುವ ದುರ್ಗೆಯನ್ನೇ ಗೌರವಪೂರ್ಣವಾಗಿ ನೋಡಿಕೊಳ್ಳದಿದ್ದರೆ ಸರಿಯಲ್ಲ. ಅದಕ್ಕಾಗಿ ಸೋದರಿ ನಿವೇದಿತಾ ಪ್ರತಿಷ್ಠಾನದ ಸೋದರಿಯರು ಪುಟ್ಟ_ಗೌರಿ ಎಂಬ ಹೆಸರಲ್ಲಿ
ಎಂಟ್ಹತ್ತು ವರ್ಷಕ್ಕಿಂತಲೂ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳಿದ್ದಲ್ಲಿ ದುರ್ಗೆಗೆ ಪೂಜೆ ಆರತಿಯಾದ ನಂತರ, ಆಕೆಯನ್ನೂ ಅದೇ ಭಾವದಲ್ಲಿ ಪೂಜಿಸುವ ಕಾರ್ಯಕ್ರಮ ಇದಾಗಿದ್ದು, ರಾಜ್ಯದ ಚಿತ್ರದುರ್ಗ, ಕನಕಪುರ, ಬಳ್ಳಾರಿ, ತುಮಕೂರು, ಬೆಂಗಳೂರಿನ ನಾಗಸಂದ್ರ, ಕೆ.ಆರ್.ಪುರಂ, ಉತ್ತರಹಳ್ಳಿ, ಕುಂಬಳಗೋಡು, ವಿನಾಯಕ ನಗರ, ಚಿಕ್ಕಮಗಳೂರು, ಧಾರವಾಡ-ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಗದಗ, ಶಿವಮೊಗ್ಗ, ಜಿಲ್ಲೆಗಳಲ್ಲಿ ಹಾಗೂ ಚೆನ್ನೈಯಲ್ಲಿ ಸೋದರಿಯರು ವಿಭಿನ್ನವಾಗಿ ಆಚರಿಸಿದರು. ಮಕ್ಕಳಿಗೆ ತಾಯಿಯರಿಂದ ಕನ್ನಿಕೆ ಪೂಜೆ ಮಾಡಿಸಿ, ಮಹಿಳೆಯರಿಗೆ ಅರಿಶಿಣ ಕುಂಕುಮ, ತಾಂಬೂಲ ನೀಡಿ ಹೆಣ್ಣು ಮಕ್ಕಳ ಮಹತ್ವವನ್ನು ತಿಳಿಸಿಕೊಡಲಾಯಿತು. ಬಳ್ಳಾರಿಯಲ್ಲಿ ಪೌರಕಾರ್ಮಿಕ ಮಹಿಳೆಯರಿಗೆ ಸನ್ಮಾನಿಸಲಾಯಿತು. ಚೆನ್ನೈನಲ್ಲಿ ಅನಾಥಾಶ್ರಮದಲ್ಲಿರುವ ಹೆಣ್ಣುಮಕ್ಕಳಿಗೆ ಕನ್ಯಾ ಪೂಜೆ ನಡೆಸಲಾಯಿತು. ಕೆಲವೆಡೆ ಸ್ತ್ರೀ ಶಿಕ್ಷಣ ಶಕ್ತಿಯ ಮಹತ್ವವನ್ನು ಕುರಿತು ತಿಳಿಸಲಾಯಿತು.
#ಪುಟ್ಟಗೌರಿ
#ಸ್ವರಾಜ್ಯಕ್ಕೆ ಮುಕ್ಕಾಲ್ನೂರು
#ಸೋದರಿ ನಿವೇದಿತಾ ಪ್ರತಿಷ್ಠಾನ