Culture

ವೀರಾಂಗನೆಯರು

ತ್ಯಾಗಕ್ಕೆ ಮತ್ತೊಂದು ಹೆಸರು ಹೆಣ್ಣು. ಬಾಳ ಬಂಡಿ ಸಾಗಿಸಲು ಹಲವಾರು ಕೆಲಸಗಳನ್ನು ಹೆಣ್ಣು ಮಕ್ಕಳು ಮಾಡುತ್ತಿದ್ದಾರೆ.
ಅಂತಹವರನ್ನು ಗುರುತಿಸಿ ವೀರಾಂಗನೆಯರು ಎಂಬ ಕಾರ್ಯಕ್ರಮವನ್ನು ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಹಲವು ಜಿಲ್ಲೆಗಳಲ್ಲಿ ಮಾಡಲಾಯಿತು. ಚಿಕ್ಕಮಗಳೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಮಹಿಳಾ ಪೌರ ಕಾರ್ಮಿಕರಿಗೆ ಅರಿಷಿಣ ಕುಂಕುಮ ನೀಡಿ, ಸಿಹಿ ಹಂಚಿ ಗೌರವಿಸಲಾಯಿತು. ಅಕ್ಕ ನಿವೇದಿತಾ ವಿಚಾರಗಳನ್ನು ತಿಳಿಸುವುದರ ಜೊತೆಗೆ ವೀರವನಿತೆಯರ ಪರಿಚಯ ಮಾಡಿಕೊಡಲಾಯಿತು. ಅರಸೀಕೆರೆಯಲ್ಲಿ ತರಕಾರಿ ಮಾರುವ ಮಹಿಳೆಯರಿಗೆ, ಮಹಿಳಾ ಪೌರ ಕಾರ್ಮಿಕರಿಗೆ, ಗೋಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಹಾಗೂ ಬಿದಿರು ಬುಟ್ಟಿ, ಹೂ ಮಾರುವ ಮಹಿಳೆಯರಿಗೆ ಗೌರವ ಸಮರ್ಪಿಸಲಾಯಿತು. ಬೆಂಗಳೂರಿನ ವಿವಿಧೆಡೆ ಪೌರ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಣತೆ, ಸೊಪ್ಪು, ಹೂ ಹಣ್ಣು ಮಾರುವ ಮಹಿಳೆಯರಿಗೆ ಗೌರವಿಸಲಾಯಿತು. ತುಮಕೂರಿನಲ್ಲಿ ಕೂಲಿ ಕಾರ್ಮಿಕರು, ಮನೆಗೆಲಸದ ಹೆಣ್ಣುಮಕ್ಕಳನ್ನು ಗೌರವಿಸಲಾಯಿತು. ಶಿವಮೊಗ್ಗದಲ್ಲಿ ಮಹಿಳಾ ಕಾರ್ಮಿಕರನ್ನು ಗೌರವಿಸಲಾಯಿತು. ಸಿಂಧನೂರು ಹಾಗೂ ಬೂದಗುಂಪಾದಲ್ಲಿ ಮನೆಕೆಲಸ ಹಾಗೂ ತರಕಾರಿ ಮಾರುವವರನ್ನು ಬಾಗಿನ ನೀಡಿ ಗೌರವಿಸಲಾಯಿತು. ಚೆನ್ನೈ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಮೈಸೂರು, ಬಳ್ಳಾರಿ, ಹುಬ್ಬಳ್ಳಿಯಲ್ಲಿ ಮನೆಗೆಲಸ, ತರಕಾರಿ ಮಾರುವ, ಪೌರ ಕಾರ್ಮಿಕರು ಹಾಗೂ ‌ಬಿದಿರಿನ ಬುಟ್ಟಿಗಳನ್ನು ಮಾರುವ ಮಹಿಳೆಯರನ್ನು ಗೌರವಿಸಲಾಯಿತು.
#ವೀರಾಂಗನೆಯರು
#ಸ್ವರಾಜ್ಯಕ್ಕೆ ಮುಕ್ಕಾಲ್ನೂರು
#ಸೋದರಿ ನಿವೇದಿತಾ ಪ್ರತಿಷ್ಠಾನ