Culture

ಸಾಮಾಜಿಕ ಬದಲಾವಣೆಯಲ್ಲಿ ಸೋದರಿ ನಿವೇದಿತಾಪ್ರತಿಷ್ಠಾನ ದ ಕಾರ್ಯಕರ್ತೆಯರು!

ನಿಜವಾದ ಬದಲಾವಣೆ ಅಂದರೆ ಇದೇ. #ಸೋದರಿನಿವೇದಿತಾಪ್ರತಿಷ್ಠಾನ ದ ಕಾರ್ಯಕರ್ತೆಯರು ನಿಜಕ್ಕೂ ಸಾಮಾಜಿಕ ಬದಲಾವಣೆಯಲ್ಲಿ ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಅವರೀಗ ಆಬಾಲವೃದ್ಧರವರೆಗೆ ಎಲ್ಲರಲ್ಲೂ ಪ್ರೀತಿಯ ಹೊನಲನ್ನು ಹರಿಸಿ ಸಂಸ್ಕೃತಿಯ ವಾಹಕವಾಗಿ ಮಾರ್ಪಡುತ್ತಿದ್ದಾರೆ.
ವೀರಭದ್ರನಗರದಲ್ಲಿ ಅವರು ನಡೆಸುವ ಪ್ರತೀವಾರದ #ಸ್ವಚ್ಚಮನಸ್ಸು ಕಾರ್ಯಕ್ರಮದ ಪರಿಣಾಮ ಅಲ್ಲಿನ ಮಕ್ಕಳು ತಾವೇ ಗಣೇಶ ಮಾಡಿ ಮನೆಮನೆಯಲ್ಲಿಟ್ಟು ಪೂಜಿಸಿದ್ದಾರೆ. ಅವರ ಪ್ರೀತಿಯ ಈ ಅಕ್ಕಂದಿರು ಅಲ್ಲಿಗೆ ಹೋದಾಗ ಸಂಭ್ರಮದಿಂದ ಮನೆಮನೆಗೂ ಎಳೆದೊಯ್ದು ತಾವು ಪೂಜಿಸುತ್ತಿರುವ ಗಣಪನನ್ನು ತೋರಿಸಿ ಸಂಭ್ರಮಿಸಿದ್ದಾರೆ. ಕೆಲವರು ಬಡವರನ್ನು ಸೆಳೆಯುವ ಮಿಷನರಿಗಳ ಬಗ್ಗೆ ಘನಘೋರ ಭಾಷಣಗಳನ್ನು ಮಾಡುತ್ತಲೇ ಇರುತ್ತಾರೆ, ಕೆಲಸ ಮಾತ್ರ ಶೂನ್ಯ. ಆದರೆ ಇಲ್ಲಿ ಕೆಲವು ಹೆಣ್ಣುಮಕ್ಕಳು ಬಲುದೊಡ್ಡ ಮ್ಯಾಜಿಕ್ ಮಾಡಿಬಿಟ್ಟಿದ್ದಾರೆ.

ಮೊನ್ನೆ ಆಶ್ರಯ ಸೇವಾ ಟ್ರಸ್ಟ್ ನ ರಾಜಾಜಿನಗರದಲ್ಲಿರುವ ವೃದ್ಧಾಶ್ರಮಕ್ಕೆ ಬಟ್ಟೆ ಕೊಡಲು ಹೋದಾಗ ಹಿರಿಯರು ಹಬ್ಬವನ್ನು ನಮ್ಮೊಂದಿಗೆ ಆಚರಿಸುವಿರಾ ಎಂದು ಕೇಳಿಕೊಂಡಿದ್ದರಂತೆ. ಅದಕ್ಕೆ ಪೂರಕವಾಗಿ ಇಂದು ಅಲ್ಲಿಗೆ ಹೋದವರ ಅನುಭವ ಅಕ್ಷರಗಳಿಗೆ ನಿಲುಕದ್ದು. ಆ ಹಿರಿಯ ಜೀವಗಳೂ ಅದೆಷ್ಟು ಸಂಭ್ರಮಿಸಿವೆಯೆಂದರೆ ಸ್ವಂತ ಮಕ್ಕಳೊಡನೆ ಹಬ್ಬ ಆಚರಿಸಿದಂತೆ ಭಾವಿಸಿವೆ!

ಇತರರಿಗಾಗಿ ಬದುಕೋದೇ ನಿಜವಾದ ಬದುಕು ಎನ್ನುತ್ತಾರಲ್ಲ ಸ್ವಾಮಿ ವಿವೇಕಾನಂದರು, ಈ ಸೋದರಿಯರಿಗಿಂತ ಚೆನ್ನಾಗಿ ಈ ಮಾತು ಅರಿತಿರುವವರನ್ನು ಹುಡುಕೋದು ಕಷ್ಟ.

ಅವರಿಗೆ ಗಣಪ ಇನ್ನೂ ಹೆಚ್ಚಿನ ಶಕ್ತಿ ಕೊಡಲಿ. ಅಷ್ಟೇ ನನ್ನ ಪ್ರಾರ್ಥನೆ.

-ಚಕ್ರವರ್ತಿ ಸೂಲಿಬೆಲೆ