Culture

ಸೀತಾನವಮಿ

2019 ಮೇ 13 ಮತ್ತು 14 ನೇ ತಾರೀಖು ಎರಡು ದಿನಗಳ ಕಾಲ ಸೀತಾ ನವಮಿ ಕಾರ್ಯಕ್ರಮವು ಬೆಂಗಳೂರು,  ಮೈಸೂರು, ಶಿವಮೊಗ್ಗ, ತರೀಕೆರೆ, ಚಿಕ್ಕಮಗಳೂರು, ನಂಜನಗೂಡು, ರಾಮನಗರ, ಬೂದಗುಂಪಾ, ಬೇವಿನಾಳ, ಕೊಪ್ಪಳ, ಹೊಸಕೋಟೆ, ಕನಕಪುರ, ತುಮಕೂರು, ಚಿತ್ರದುರ್ಗ, ಬೆಳಗಾವಿ, ಹಾಸನ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ ದಾವಣಗೆರೆಗಳಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳು ಗರ್ಭಿಣಿಯರಿಗೆ ಅನೇಕ ಸಕಾರಾತ್ಮಕ ಅಂಶಗಳನ್ನು ತಿಳಿಸಿಕೊಟ್ಟರು.

*ಸೀತೆಯನ್ನು ಆದರ್ಶ ಪತ್ನಿಯಾಗಿ ಅಲ್ಲದೇ, ಆದರ್ಶ ತಾಯಿಯಾಗಿ ನೋಡಬೇಕು.

*ಗರ್ಭಾವಸ್ಥೆಯಲ್ಲಿ ತಾಯಿಯ ಮನಸ್ಥಿತಿ ಧನಾತ್ಮಕ ಆಲೋಚನೆಗಳಿಂದ ತುಂಬಿರಬೇಕು.

*ಆಹಾರ,ವಿಹಾರ, ಶುಚಿತ್ವ, ಮಾನಸಿಕ ಹಾಗೂ ಶಾರೀರಿಕ ಬದಲಾವಣೆಗಳ ಬಗ್ಗೆ ಸಕಾರಾತ್ಮಕವಾಗಿ ಇರಬೇಕು‌

*ಶೋಡಷ ಸಂಸ್ಕಾರ ಮತ್ತು ಗರ್ಭ ಸಂಸ್ಕಾರದ ಬಗ್ಗೆ ತಿಳಿಸಿಕೊಟ್ಟರು.

*ಹೆಣ್ಣು ತಾಯ್ತನ ಅನುಭವಿಸಲು  ತನ್ನನ್ನು ತಾನು ಪಕ್ವವಾಗಿಸಿಕೊಳ್ಳುವುದು ಹೇಗೆ? ಗರ್ಭ ಧರಿಸಿದ ನಂತರ  ಆಕೆ ತನ್ನ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ತಿಳಿಸಲಾಯಿತು.

*ಗರ್ಭಿಣಿಯರ ಆರೈಕೆಯಲ್ಲಿ ಶ್ರಮಿಸುವ ಪರಿವಾರದ ಜನ, ಗರ್ಭ ನಿಲ್ಲಲು, ಶರೀರದ ಒಳಗೊಂದು ಶರೀರ ಬೆಳೆಯುವಂತೆ ಮಾಡಿದ ಸೃಷ್ಠಿ ಕರ್ತನಿಗೂ ಆಕೆ ಯಾವ ರೀತಿ ಕೃತಜ್ಞತೆ ಹೇಳಬೇಕು ಆ ಕಾರ್ಯ ದಿಂದ ಆಕೆಯ ಆಂತರ್ಯದಲ್ಲಿ ಆಗುವ ಬದಲಾವಣೆಗಳ ಕುರಿತು ತಿಳಿಸಲಾಯಿತು.

*ಸಂಸ್ಕಾರದ ಮಹತ್ವ ಹಾಗೂ ಉತ್ತಮ ಪ್ರಜೆಯನ್ನು ಪಡೆಯಲು ನಮ್ಮ ಸಂಸ್ಕ್ರತಿಯಲ್ಲಿ ಋಷಿ ಮುನಿಗಳು ತಿಳಿಸಿದ ಸಂಸ್ಕಾರಗಳ ಕುರಿತು ವಿವರವಾಗಿ ತಿಳಿಸಲಾಯಿತು.

#ಸೀತಾ_ಸೀಮಂತ

#Seetha_Navami