Culture

ಸೀತಾ ನವಮಿ – ಬೆಂಗಳೂರು

ಸೋದರಿ ನಿವೇದಿತಾ ಪ್ರತಿಷ್ಠಾನ
13.05.2019
#ಸೀತಾ_ನವಮಿ ವಿದ್ಯಾಪೀಠ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಗರ್ಭ ಸಂಸ್ಕಾರ ವರ್ಗ.
ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿ, ಮಾತನಾಡಿದ ಲೇಖಕಿ ಸುಧಾ ಶರ್ಮಾ ಅಕ್ಕ, ಹೆಣ್ಣು ತಾಯ್ತನ ಅನುಭವಿಸಲು ತನ್ನನ್ನು ತಾನು ಪಕ್ವವಾಗಿಸಿಕೊಳ್ಳುವುದು ಹೇಗೆ? ಗರ್ಭ ಧರಿಸಿದ ನಂತರ ಆಕೆ ತನ್ನ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಬಗೆ , ಗರ್ಭಿಣಿಯರ ಆರೈಕೆಯಲ್ಲಿ ಶ್ರಮಿಸುವ ಪರಿವಾರದ ಜನ, ಗರ್ಭ ನಿಲ್ಲಲು, ಶರೀರದ ಒಳಗೊಂದು ಶರೀರ ಬೆಳೆಯುವಂತೆ ಮಾಡಿದ ಸೃಷ್ಠಿ ಕರ್ತನಿಗೂ ಆಕೆ ಯಾವ ರೀತಿ ಕೃತಜ್ಞತೆ ಹೇಳಬೇಕು ಆ ಕಾರ್ಯ ದಿಂದ ಆಕೆಯ ಆಂತರ್ಯದಲ್ಲಿ ಆಗುವ ಬದಲಾವಣೆಗಳ ಕುರಿತು ಸುಧಾ ಅಕ್ಕ ಬೆಳಕು ಚೆಲ್ಲಿದರು.
ಕಾರ್ಯಕ್ರಮದಲ್ಲಿ ಸಂಸ್ಕಾರದ ಮಹತ್ವ ಹಾಗೂ ಉತ್ತಮ ಪ್ರಜೆಯನ್ನು ಪಡೆಯಲು ನಮ್ಮ ಸಂಸ್ಕ್ರತಿಯಲ್ಲಿ ಋಷಿ ಮುನಿಗಳು ತಿಳಿಸಿದ ಸಂಸ್ಕಾರಗಳ ಕುರಿತು ವಿವರವಾಗಿ ತಿಳಿಸಿದವರು ಮೈತ್ರೆಯಿ ಕನ್ಯಾ ಗುರುಕುಲದ ಆಚಾರ್ಯೆ ಅಮೃತವರ್ಷಿಣಿ ಅಕ್ಕ ಮಾತನಾಡಿ, ಇಂದಿನ ವಿಜ್ಞಾನ ಕ್ಕಿಂತಲೂ ಸಾವಿರಾರು ವರ್ಷಗಳ ಹಿಂದೆಯೇ ಪ್ರಜಾ ಉತ್ಪತ್ತಿಗಾಗಿ ಹಲವು ಸಂಸ್ಕಾರಗಳನ್ನು ವೈಜ್ಞಾನಿಕ ಹಿನ್ನಲೆಯಲ್ಲಿಯೇ ತಿಳಿಸಿದ್ದಾರೆ. ವಿವಾಹ, ಪುಂಸವನ, ಸೀಮಂತ ಇವುಗಳ ಸರಿಯಾದ ಅರ್ಥ ತಿಳಿದು ನಾವು ಅನುಸರಿಸಿದ್ದೇ ಆದಲ್ಲಿ ಗರ್ಭಿಣಿಯರು ಉತ್ತಮ ಸಂತಾನ ಪಡೆಯಬಹುದು ಎಂದರು.
ಪ್ರತಿಷ್ಠಾನದ ಸದಸ್ಯರು, ಆಸ್ಪತ್ರೆ ವೈದ್ಯೆ ‌ರೂಪಾವಾಣಿ, ಸುಪ್ರಸವಿಕಾ ಯೋಗ ಕೇಂದ್ರದ ಅನುರಾಧಾ ಅಕ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
#ಸೀತಾ_ಸೀಮಂತ
#Seetha_Navami