Culture

ಸ್ತ್ರೀಶಕ್ತಿ ಜಾಗೃತಿ

ಸೆಪ್ಟೆಂಬರ್ ತಿಂಗಳು ಪೂರ್ತಿ ಸೋದರಿ ನಿವೇದಿತಾ ಪ್ರತಿಷ್ಠಾನದ ಸೋದರಿಯರು, ರಾಜ್ಯದ ಹಲವೆಡೆ‌ ಹಲವು ಸಮುದಾಯದ ಸ್ತ್ರೀಯರೊಡನೆ ಸ್ತ್ರೀ ಶಕ್ತಿ ಜಾಗೃತಿ ಪರಿಕಲ್ಪನೆಯಲ್ಲಿ ಕಾರ್ಯಕ್ರಮ ನಡೆಸಿ, ಅವರೊಡನೆ ಆಪ್ತ ಸಂವಾದ‌ ನಡೆಸಿದರು. ಜೊತೆಗೆ ನೊಂದ ಹೆಣ್ಣು ಮಕ್ಕಳಿಗೆ ಹಲವು ಸ್ಫೂರ್ತಿದಾಯಕ ವಿಚಾರಗಳನ್ನು ‌ತಿಳಿಸಿ ಆತ್ಮವಿಶ್ವಾಸ ತುಂಬಿದರು. ಸ್ತ್ರೀ ಶಕ್ತಿ ಸ್ವರೂಪಿಣಿ, ಮನಸ್ಸು ಮಾಡಿದರೆ, ಏನನ್ನಾದರೂ ಸಾಧಿಸಬಲ್ಲಳು ಅನ್ನುವದಕ್ಕೆ ಸಾಕ್ಷಿಯಾದರು. ಕಳೆದ ತಿಂಗಳಿನಲ್ಲಿ ನಡೆದ ಈ ಕಾರ್ಯಕ್ರಮ ಹಲವು ಮಹಿಳೆಯರ ವಿಚಾರಧಾರೆ, ಹಾಗೂ ಸ್ವಸಾಮರ್ಥ್ಯ ಪರಿಚಯಿಸಿದ ರೀತಿ ಅನನ್ಯ..ಅಮೋಘ.. ಅದ್ಭುತ.

ಬೆಂಗಳೂರು:
ಅಮೃತ ಅವರು ನಡೆಸುತ್ತಿರುವ ಸ್ತ್ರೀ ಸಾಂತ್ವನ ಕೇಂದ್ರದಲ್ಲಿರುವ ಮನೋವೇದನೆಯಿಂದ ಕುಗ್ಗಿ ಹೋಗಿರುವ ಸ್ತ್ರೀಯರಿಗೆ ಸ್ಫೂರ್ತಿ ಹಾಗೂ ಭರವಸೆಯ ಬೆಳಕನ್ನು ತುಂಬಲಾಯ್ತು.

ಮಂಡೂರು:
ವಿದ್ಯಾರಣ್ಯ ಸ್ತ್ರೀ ಸಾಂತ್ವನ ಕೇಂದ್ರದ ಸ್ತ್ರೀಯರಿಗೆ, ಸೋಲೇ ಗೆಲುವಿನ ಸೋಪಾನ ಎನ್ನುವ ಆತ್ಮವಿಶ್ವಾಸ ತುಂಬಿ ಹಲವು ಕೆಳಮಟ್ಟದಿಂದ ಬಂದ ಸಾಧಕರ ಪರಿಚಯ ನೀಡಿ ಸ್ಫೂರ್ತಿ ತುಂಬಿ, ಹೂ ಹಣ್ಣಿನ ಗಿಡಗಳನ್ನು ನೀಡಲಾಯಿತು.

ರಾಜಾಜಿನಗರ:
ಸ್ವಾತಿ ಮಹಿಳಾ ಸಂಘದ, ಪರಿಸ್ಥಿತಿ ಒತ್ತಡಗಳಿಂದ ಬಳಲಿರುವ ಲೈಂಗಿಕ ಕಾರ್ಯಕರ್ತೆ ಸ್ತ್ರೀಯರಿಗಾಗಿ ಕಾರ್ಯಕ್ರಮ ನಡೆಸಿ ಅವರಲ್ಲಿ ಸಮಾಜಮುಖಿಯರಾಗಿ ಸಮಾಜದ ಒಳತಿಗಾಗಿ ಸೇವೆ ಸಲ್ಲಿಸುವಂತಹ ಪ್ರೇರಣೆ ತುಂಬಲಾಯ್ತು.

ಚಿತ್ರದುರ್ಗ:
ಶ್ರೀ ಬಸವೇಶ್ವರ ನೊಂದ ಹೆಣ್ಣುಮಕ್ಕಳ ಕೇಂದ್ರದಲ್ಲಿ, ಅಲ್ಲಿಯ ಹೆಣ್ಣುಮಕ್ಕಳಿಗೆ ಪ್ರತಿಷ್ಠಾನದ ವತಿಯಿಂದ ಉತ್ತಮ ಸಕಾರಾತ್ಮಕ ಯೋಚನೆ ತುಂಬಲಾಯ್ತು. ಅಲ್ಲಿಯ ಮುಖ್ಯಸ್ಥರು ಇಂತಹ ಕಾರ್ಯಕ್ರಮಗಳು ಪ್ರಶಂಸನೀಯ. ಆಗಾಗ ನಡೆಯುತ್ತಿರಲಿ ಎಂದು ಆಶಯ ವ್ಯಕ್ತಪಡಿಸಿದರು.

ಗದಗ:
ಅನಾಥ ಹಾಗೂ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ಸರ್ಕಾರಿ ಬಾಲಮಂದಿರದಲ್ಲಿ, ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮ ನಡೆಸಿ ಸ್ಫೂರ್ತಿ ತುಂಬುವ ಕೆಲಸ ನಡೆಯಿತು. ಸಂಸ್ಥೆಯ ಪರಿವೀಕ್ಷಣಾ ಅಧಿಕಾರಿಗಳು, ಇಂತಹ ಕಾರ್ಯಕ್ರಮಗಳಿಂದ ಉತ್ತಮ ಸಕಾರಾತ್ಮಕ ಯೋಚನೆಗಳು ಸಾಧ್ಯ ಎಂದು ತಿಳಿಸಿದರು.

ಸಿಂಧನೂರು:
ಮಂಗಳ ಮುಖಿಯರಿರುವ ಮನೆಗೆ ಹೋಗಿ ಸ್ಪೂರ್ತಿದಾಯಕ ವಿಚಾರಗಳನ್ನು ತುಂಬಲಾಯಿತು. ಸ್ವಯಂ ಅರಿವನ್ನು ಮೂಡಿಸಲಾಯ್ತು, ಅದರಿಂದ ಪ್ರೇರಿತರಾಗಿ ಆ ಮಹಿಳೆಯರು ಸಂಭ್ರಮ ಪಟ್ಟರು.

ಚಿಕ್ಕಮಗಳೂರು:
ಮಂಗಳಮುಖಿಯರಿಗಾಗಿ ಕಾರ್ಯಕ್ರಮ ನಡೆಸಿ, ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಮುನ್ನಡೆಯಲು ಸ್ಫೂರ್ತಿ ನೀಡಿ ಕೆಲವು ಕಾನೂನು ಸಲಹೆಗಳನ್ನೂ ನೀಡಲಾಯ್ತು. ಅವರೂ ಪ್ರತಿಷ್ಠಾನದ ಕಾರ್ಯಕ್ರಮಗಳಿಗೆ ಭಾಗವಹಿಸಲು ಆಸಕ್ತಿ ತೋರಿದರು.

ಹೊಸಕೋಟೆ:
ಸ್ತ್ರೀ ಸಾಂತ್ವನ ಕೇಂದ್ರದಲ್ಲಿ ಕಾರ್ಯಕ್ರಮ ನಡೆಸಿ, ಸಾಧಕ ಮಹಿಳೆಯರ ಪ್ರೇರಣೆ ನೀಡಿ ಆತ್ಮವಿಶ್ವಾಸ ತುಂಬಲಾಯ್ತು.

ಬಳ್ಳಾರಿ:
ದಮನಿತ ಮಹಿಳೆಯರಿಗಾಗಿ ನಡೆಸುತ್ತಿರುವ ಅಂದ್ರಾಳ್ ಗ್ರಾಮದ ಚಿಕ್ಕಿ ಘಟಕದಲ್ಲಿ ಕಾರ್ಯಕ್ರಮ ನಡೆಸಿ , ಸೋದರಿ ನಿವೇದಿತಾಳ ಜೀವನ ಮತ್ತು ದೇಶಕ್ಕಾಗಿ ಸಲ್ಲಿಸಿದ ಕಾರ್ಯಗಳನ್ನು ವಿವರಿಸಿ ಅಂತಃಶಕ್ತಿಯಲ್ಲಡಗಿರುವ ಸ್ತ್ರೀಶಕ್ತಿಯನ್ನು ಹೊರತರುವಂತೆ ಪ್ರೇರೇಪಿಸಲಾಯ್ತು. ಸಂವಾದ ನಡೆಯಿತು‌. ಅಲ್ಲಿಯ ಮೇಲ್ವಿಚಾರಕರು ಅಕ್ಕ ನಿವೇದಿತಾ ಬಗ್ಗೆ ಮಾಹಿತಿ ಇರಲಿಲ್ಲ, ತುಂಬಾ ಒಳ್ಳೆಯ ಪ್ರೇರಣೆ ನೀಡುವ ಮಹಿಳೆ, ಧನ್ಯವಾದಗಳು ಎಂದು ತಿಳಿಸಿದರು.

ಕೊಪ್ಪಳ:
ಬೂದಗುಂಪಾ
ರೈತ ಮಹಿಳೆಯರೊಡನೆ ಕಾರ್ಯಕ್ರಮ ನಡೆಯಿತು, ಪ್ರತಿಷ್ಠಾನದ ಹಲವಾರು ಕಾರ್ಯಕ್ರಮ ವಿವರಿಸಿ ಸಂವಾದ ನಡೆಸಲಾಯಿತು. ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು..

ಹಾಸನ:
ಅರಸೀಕೆರೆ
ಚನ್ನರಾಯಪಟ್ಟಣದ ವಿದ್ಯಾರಣ್ಯ ಸ್ತ್ರೀ ಸಾಂತ್ವನ ಕೇಂದ್ರದ ಮಹಿಳೆಯರೊಂದಿಗೆ ಕಾರ್ಯಕ್ರಮ ನಡೆಯಿತು. ಸೋದರಿ ನಿವೇದಿತಾರ ಜೀವನ ಮತ್ತು ಹಲವು ಸಾಧಕಿಯರ ಪರಿಚಯ ನೀಡಿ ಮಹಿಳೆಯ ಶಕ್ತಿಯ ಕುರಿತು ಅರಿವು ನೀಡಲಾಯಿತು. ಮಹಿಳೆಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಹುಬ್ಬಳ್ಳಿ ಧಾರವಾಡ:
ಮನೆಕೆಲಸಗಳಿಗೆ ಹೋಗುವ ಸ್ತ್ರೀಯರೊಂದಿಗೆ ಕಾರ್ಯಕ್ರಮ ನಡೆಸಲಾಯಿತು, ಅಭಿಪ್ರಾಯ ಹಂಚಿಕೆಯ ಜೊತೆಗೆ ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಪ್ರೇರಣೆ ನೀಡಿ, ವೀರಕೇಸರಿ ಪುಸ್ತಕಗಳನ್ನು ನೀಡಲಾಯಿತು.

ಹೊಸಪೇಟೆ: ವೆಂಕಟಾಪು ರ
ರೈತ ಮಹಿಳೆಯರು ಹಾಗೂ ಮಹಿಳಾ ಸ್ತ್ರೀಶಕ್ತಿ ಸಂಘದ ಮಹಿಳೆಯರೊಂದಿಗೆ ನಡೆದ ಕಾರ್ಯಕ್ರಮದಲ್ಲಿ.
ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳಾದ ಶ್ರೀಮತಿ ಸರೋಜ ಅವರು ಸ್ಪೂರ್ತಿದಾಯಕ ವಿಚಾರಗಳು ಹಾಗೂ ಮಹಿಳೆಯ ಶಕ್ತಿ, ಸಾಮರ್ಥ್ಯಗಳ ಬಗ್ಗೆ ತಿಳಿಸಿಕೊಟ್ಟರು.
ಈ ರೀತಿ ಕಾರ್ಯಕ್ರಮದಿಂದ ಹೆಣ್ಣು ಮಕ್ಕಳಲ್ಲಿ ಧೈರ್ಯ ಹಾಗೂ ಸಕಾರಾತ್ಮಕ ಯೋಚನೆ ಸಾಧ್ಯ ಎಂದು ಗುಂಪಿನ ಸದಸ್ಯರಾದ ಶ್ರೀಮತಿ ರಾಜೇಶ್ವರಿಯವರು ತಿಳಿಸಿದರು.
ರೈತ ಮಹಿಳೆಯರೊಂದಿಗೆ ಸಂವಾದ ನಡೆದು ಅಭಿಪ್ರಾಯ ಹಂಚಿಕೊಂಡರು.

ಶಿವಮೊಗ್ಗ:
ನೊಂದ ಹೆಣ್ಣುಮಕ್ಕಳ ಸಾಂತ್ವನ ಕೇಂದ್ರವಾಗಿರುವ ಸುರಭಿ ಉಜ್ವಲ ಕೇಂದ್ರದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಆಪ್ತ ಸಮಾಲೋಚಕರ ಸ್ಫೂರ್ತಿದಾಯಕ ಮಾತುಗಳು ಅಲ್ಲಿಯ ಹೆಣ್ಣುಮಕ್ಕಳಲ್ಲಿ ಭರವಸೆ ಹೆಚ್ಚಿಸಿದವು. ಅಲ್ಲಿರುವ ಹೆಣ್ಣುಮಕ್ಕಳು ಹಾಗೂ ನಿರ್ದೇಶಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಜೊತೆಗೆ ಕರಕುಶಲ ತರಬೇತಿ ನಡೆಸುವಂತೆ ಕೇಳಿಕೊಂಡರು. ನಿಮ್ಮ ಇಂತಹ ಕಾರ್ಯಕ್ರಮಗಳು ಸಕಾರಾತ್ಮಕ ಚಿಂತನೆಗಳು ಬೆಳೆಯಲು ಸಹಾಯ ಮಾಡುತ್ತದೆ ಎಂದರು.

ಎಲ್ಲಾ ಜಿಲ್ಲೆಯ ಕಾರ್ಯಕ್ರಮಗಳು ಸ್ಪೂರ್ತಿದಾಯಕ , ಪ್ರೇರಣಾದಾಯಕ, ಸಕಾರಾತ್ಮಕ ಚಿಂತನೆಗಳಿಗೆ ದಾರಿ ಎಂಬ ಮಾತುಗಳಿಗೆ ಮುನ್ನುಡಿಯಾಯ್ತು. ನಮ್ಮಲ್ಲಿಯೇ ಇರುವ ಸ್ತ್ರೀ ಶಕ್ತಿಯನ್ನು ಜಾಗೃತಿಗೊಳಿಸುವ ಕಾರ್ಯಕ್ರಮಗಳು ನಡೆಯುತ್ತಿರಲಿ ಎಂದು ಎಲ್ಲಾ ಕೇಂದ್ರದ ಮುಖ್ಯಸ್ಥರ ಕೋರಿಕೆಯಾಗಿತ್ತು.