*ಸ್ವಚ್ಛತೆಯೇ_ಭಕ್ತಿ*
ಸೋದರಿ ನಿವೇದಿತಾ ಪ್ರತಿಷ್ಠಾನದ ಸೋದರಿಯರು ದೇವಸ್ಥಾನಗಳ ಸ್ವಚ್ಛತೆಯ ಕೈಂಕರ್ಯಕ್ಕೆ ಪಣ ತೊಟ್ಟು ಹಲವಾರು ದೇವಾಲಯಗಳನ್ನು ಸ್ವಚ್ಛತೆಯನ್ನು ಹಲವು ಜಿಲ್ಲೆಗಳಲ್ಲಿ ಮಾಡಿದರು. ಬೆಂಗಳೂರು, ಮೈಸೂರು, ತುಮಕೂರಿನ ಸೋದರಿಯರು ಕಿಕ್ಕೇರಿಯ ಪ್ರಾಚೀನ ಬ್ರಹ್ಮೇಶ್ವರ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಹಳ್ಳಿಯ ಜನರ ಪ್ರೀತಿಗೆ ಪಾತ್ರರಾದರು. ಅದೇ ರೀತಿ ಶಿವಮೊಗ್ಗದ ಸೋದರಿಯರು ಶ್ರೀ ಕೃಷ್ಣ ದೇವಸ್ಥಾನವನ್ನು, ಚಿಕ್ಕಮಗಳೂರಿನ ಸೋದರಿಯರು ಶ್ರೀ ರಾಮ ದೇವಾಲಯವನ್ನು ಸ್ವಚ್ಛಗೊಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋದರಿಯರು ವಿಜಯಪುರದ ಸೋಮೇಶ್ವರ ದೇವಾಲಯವನ್ನು, ದಕ್ಷಿಣ ಕನ್ನಡ ಜಿಲ್ಲೆಯ ಸೋದರಿಯರು ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಾಲಯದ ಆವರಣವನ್ನು, ಚಿತ್ರದುರ್ಗ ಜಿಲ್ಲೆಯ ಸೋದರಿಯರು ಚನ್ನಕೇಶವ ದೇವಾಲಯ ತುಮಕೂರಿನ ಸೋದರಿಯರು ಕಾಶಿ ವಿಶ್ವನಾಥ ದೇವಾಲಯದ ಆವರಣವನ್ನು, ಹುಬ್ಬಳ್ಳಿ ಧಾರವಾಡ ಸೋದರಿಯರು ಸಿದ್ದಪ್ಪಜ್ಜನ ಗುಡಿಯನ್ನು ಸ್ವಚ್ಛಗೊಳಿಸುವುದರ ಮೂಲಕ ಭಕ್ತಿಯ ಸೇವೆ ಮಾಡಿದರು.
Add Comment