Education

ಜಲಿಯನ್ ವಾಲಾಬಾಗ್ ಘಟನೆಗೆ 100ವರ್ಷ!

ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳಿಗೆ ತಿರುಚಿದ ಇತಿಹಾಸವನ್ನೇ ಹೇಳಿ ಕೊಡಲಾಗುತ್ತಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಹಲವಾರು ಸಂಗತಿಗಳು‌ ಎಷ್ಟೋ ಮಕ್ಕಳಿಗೆ ತಿಳಿದಿಲ್ಲ. ಇಂತಹ ವಿಷಯಗಳನ್ನು‌ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವ ಉದ್ದೇಶದಿಂದ  ಸೋದರಿ ನಿವೇದಿತಾ ಪ್ರತಿಷ್ಠಾನ ವೀಡಿಯೋಗಳನ್ನು ಶಾಲೆ ಕಾಲೇಜು ಗಳಲ್ಲಿ ತೋರಿಸಲಾಯಿತು. ಅವುಗಳಲ್ಲಿ‌ ಮುಖ್ಯವಾಗಿ ವಿನಾಯಕ್ ದಾಮೋದರ ಸಾವರ್ಕರ್, ಸೋದರಿ ನಿವೇದಿತಾ, ಕಾರ್ಗಿಲ್ ಕದನ ಹಾಗೂ ಇತ್ತೀಚೆಗೆ ಜಲಿಯನ್ ವಾಲಾಬಾಗ್ ಘಟನೆಗೆ 100ವರ್ಷ ಪೂರೈಸಿದ ನಿಟ್ಟಿನಲ್ಲಿ ಜಲಿಯನ್ ವಾಲಾಬಾಗ್ ವೀಡಿಯೋ ಅನ್ನು ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ತೋರಿಸಲಾಗುತ್ತಿದೆ. ಮಕ್ಕಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.  ವೀಡಿಯೋ ನೋಡುವಾಗ ಅದೆಷ್ಟೋ ಮಕ್ಕಳು, ಶಿಕ್ಷಕರು ಭಾವುಕರಾಗಿದ್ದಾರೆ.  ನಾವು ಹೇಳುವ ಪಾಠ ಕ್ಕಿಂತ  ವೀಡಿಯೋ  ತುಂಬಾ ಪರಿಣಾಮಕಾರಿಯಾಗಿದೆ, ನೀವು ಹೀಗೆ‌ ಪ್ರತಿ ತಿಂಗಳು ನಮ್ಮ ಮಕ್ಕಳಿಗೆ ಒಂದೊಂದು‌ ವೀಡಿಯೋಗಳನ್ನು ತಂದು‌ ತೋರಿಸಿ ಎಂದು ಶಿಕ್ಷಕರು ಪ್ರತಿಷ್ಠಾನದ ಸೋದರಿಯರಲ್ಲಿ ವಿನಂತಿಸುತ್ತಿದ್ದಾರೆ. ಮಕ್ಕಳು ಪ್ರೇರಣೆ‌ ಪಡೆದು ನಾವು ದೇಶಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು ಅಂತ ಮುಂದೆ‌ಬರುತ್ತಿದ್ದಾರೆ.