Education

ಸೋಪುತಯಾರಿಕಲಿಕೆ ಹಾಗೂ ನೋವಿನ ಎಣ್ಣೆ ತಯಾರಿ ಕಲಿಕೆ ಕಾರ್ಯಾಗಾರ

ಸೋದರಿ ನಿವೇದಿತಾ ಪ್ರತಿಷ್ಠಾನ
ಬೆಂಗಳೂರು ಸೋದರಿಯರು
ಮಹಿಳೆಯರ ಸಶಕ್ತಿಕರಣದ ಉದ್ದೇಶದಿಂದ ಸಣ್ಣ ಪ್ರಮಾಣದಲ್ಲಿ ಮಹಿಳೆಯರು ಸ್ವತಂತ್ರವಾಗಿ ಆರಂಭಿಸಬಹುದಾದ ಕೆಲವು ಉತ್ಪನ್ನಗಳನ್ನು ಕಾರ್ಯಾಗಾರದಲ್ಲಿ ಪರಿಣಿತರಿಂದ ಪ್ರಾತ್ಯಕ್ಷಿಕೆಯ ಮೂಲಕ ಕಲಿತುಕೊಂಡರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪುಷ್ಪಾವತಿ ಅವರು ಮಾತನಾಡುತ್ತ, ಮೂರುಸಾವಿರ ಗುರಿಯಿಂದ ಪ್ರಾರಂಭಗೊಂಡ ತಮ್ಮ ಸ್ವ ಉದ್ಯೋಗ ಸಂಸ್ಥೆ ಈಗ ಮೂವತ್ತು ಲಕ್ಷ ವಹಿವಾಟು ನಡೆಸುತ್ತಿದೆ ಎಂದು ತಮ್ಮ ಯಶಸ್ಸಿನ ಪಯಣವನ್ನು ಹಂಚಿಕೊಂಡರು.
ಸೋಪ್ ಮಾಡುವುದು ಹೇಗೆ ಅದರಲ್ಲಿ ಬರುವ ಸವಾಲುಗಳು ಕುರಿತು ಹಾಗೂ ಯಾರಾದರೂ ಸೋಪ್ ಮಾಡುವವರಿದ್ದರೆ ಅವರಿಗೆ ಸಹಾಯವನ್ನು ನೀಡುವ ಭರವಸೆಯನ್ನು ನೀಡಿದವರು ಶ್ರೀಮತಿ ಸರಸ್ವತಿಯವರು.
ಇಪ್ಪತ್ತಕ್ಕೂ ಹೆಚ್ಚು ಸೋದರಿಯರು ಈ ಕಾರ್ಯಾಗಾರದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕಲಿತು,
ಸ್ವ ಉದ್ಯೋಗ ಪ್ರಾರಂಭ ಮಾಡುವ ಉತ್ಸಾಹದಿಂದ ಮರಳಿದರು.‌
_SNP ಬೆಂಗಳೂರು