Front Event

ದೀಕ್ಷಾ ದಿವಸ್

ಸೋದರಿ ನಿವೇದಿತಾ ಪ್ರತಿಷ್ಠಾನ
ಮಾರ್ಚ್ 28ರಂದು ದೀಕ್ಷಾ ದಿವಸ್ ರಾಜ್ಯ ಮಟ್ಟದ ಬೈಠಕ್ ಶಿವಮೊಗ್ಗದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸಹೋದರಿಯರು ಪಾಲ್ಗೊಳ್ಳುವ ಮೂಲಕ
ಚಕ್ರವರ್ತಿ ಅಣ್ಣನ ಉಪಸ್ಥಿತಿ ಮತ್ತು ಮಾರ್ಗದರ್ಶನಲ್ಲಿ,
ನೆರವೇರಿತು.

ನಮ್ಮೆಲ್ಲರ ಪಾಲಿಗೆ ಉತ್ಸಾಹ ತುಂಬುವ ಮಹತ್ವದ ದಿನ ದೀಕ್ಷಾ ದಿವಸ್.
ಹಿಂದೆ ನಡೆದ ಸೇವಾ ಚಟುವಟಿಕೆಗಳ ವರದಿ ಮತ್ತು ಮುಂದಿನ ದಿನಗಳಲ್ಲಿ ನಿವೇದಿತಾ ಪ್ರತಿಷ್ಠಾನ ಮಾಡಬೇಕಿರುವ ಚಟುವಟಿಕೆಗಳ ರೂಪುರೇಷೆಗಳ ಬಗ್ಗೆ ವಿಸ್ತಾರ ಚರ್ಚೆ ನಡೆದು ರೂಪುರೇಷೆ ತಯಾರಿಸಿಕೊಳ್ಳಲಾಯಿತು.

ನಾಯಕನ ಲಕ್ಷಣಗಳೇನು? ಕಾರ್ಯಕರ್ತ ಹೇಗಿರಬೇಕು? ಎಂಬ ಬಗ್ಗೆ ವಿಚಾರ ಮಂಡನೆಯೊಂದಿಗೆ ಚರ್ಚೆ ನಡೆಯಿತು. ಆ ಕುರಿತು ಚಕ್ರವರ್ತಿ ಅಣ್ಣ ಸೋದರಿಯರಿಗೆ ಮಾರ್ಗದರ್ಶನ ನೀಡಿದರು.

ಹಿಂದಿನ ಅನುಭವಗಳ ಆಧಾರದ ಮೇಲೆ ಪ್ರತಿಷ್ಠಾನದ ಗುಂಪಿನ ವಿಸ್ತರಣೆಯ ಬಗ್ಗೆಯೂ ಚರ್ಚಿಸಲಾಯಿತು. ಎಲ್ಲ ಸೋದರಿಯರೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಲಾಯಿತು.
ಕಾರ್ಯಕ್ರಮವನ್ನು

ಸಂಜೆ ಆಯೋಜಿಸಿದ್ದ ಸ್ತ್ರೀ ಶಕ್ತಿ ಜಾಗೃತಿ ಒಂದು ಸಂವಾದ ‘ಜಿಲ್ಲೆಯ ಪ್ರಮುಖರೊಂದಿಗಿನ ಸಂವಾದ’ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ಹಂಚಿಕೊಳ್ಳುವ ಮತ್ತು ವಿವಿಧ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರ ಅನುಭವಗಳನ್ನು ಆಲಿಸುವ ವೇದಿಕೆಯಾಗಿತ್ತು.
ಪ್ರತಿಷ್ಠಾನದ ಕೆಲಸಗಳಿಂದ ಹಲವರು ಪ್ರೇರಣೆ ಪಡೆದರೆ, ಅಲ್ಲಿಯ ಪ್ರಮುಖರ ಅನುಭವಗಳು ಪ್ರತಿಷ್ಠಾನದ ಮುಂದಿನ ಯೋಜನೆಗಳನ್ನು ರೂಪಿಸಿಕೊಳ್ಳುವಲ್ಲಿ ನೆರವಾದವು.