Inspiration

ಪ್ರಣಾಮ್ – ಸಿಡಿಲ ಸಂತಾನಗಳೊಂದಿಗೆ ಆತ್ಮೀಯ ಕ್ಷಣಗಳು..

ಬೆಂಗಳೂರು:
ನಗರದಲ್ಲಿ ನಡೆದ ವಿಶೇಷವಾದ ಪ್ರೇರಣಾತ್ಮಕ ಕಾರ್ಯಕ್ರಮದಲ್ಲಿ . ತೆರೆಮರೆಯ ಸಾಧಕಿಯರ ಪಯಣದ ಬಗ್ಗೆ ಅವರಿಂದಲೇ ತಿಳಿದುಕೊಳ್ಳುವುದರ ಮೂಲಕ ಸಾಕಷ್ಟು ಪ್ರೇರಣೆ ದೊರೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದೃಷ್ಟಿಹೀನ ಮೊದಲ ಚಾರ್ಟೆಡ್ ಅಕೌಂಟೆಂಟ್ ರಜನಿ ಗೋಪಾಲಕೃಷ್ಣರವರು, ಮಾತಾನಾಡಿ ತಮ್ಮ ಜೀವನದ ಹಾದಿಯ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡರು. ಬಾಲ್ಯದ ನೆನಪುಗಳು, ತಮಗೆ ಎದುರಾದ ಕಷ್ಟಗಳು, ಧೃತಿಗೆಡದೆ ಅವುಗಳನ್ನು ಸವಾಲಾಗಿ ಸ್ವೀಕರಿಸಿದ ರೀತಿ, ಹಾಗೂ ದೇವರಲ್ಲಿ ತಮಗಿದ್ದ ನಂಬಿಕೆಯ ಬಗ್ಗೆ ಮಾತಾನಾಡಿದರು. ‘ಕಷ್ಟಗಳೊಂದಿಗೆ, ಅವುಗಳನ್ನು ಎದುರಿಸುವ ಸಾಮರ್ಥ್ಯ ವನ್ನೂ ಕೊಡು’ ಎಂದು ದೇವರನ್ನು ಕುರಿತ ಅವರ ಪ್ರಾರ್ಥನೆಯು, ಅವರ ಮನೋಧೈರ್ಯವನ್ನು ಬಿಂಬಿಸುತ್ತಿತ್ತು.

ಹುತಾತ್ಮ ಯೋಧ ಮೇಜರ್ ಅಕ್ಷಯ್ ಗಿರೀಶ್ ರವರ ತಾಯಿ ಮೇಘನಾ ಗಿರೀಶ್, ಮಾತನಾಡಿ ತಮ್ಮ ಮಗ ಅಕ್ಷಯ್ ಗಿರೀಶ್ ರವರು ಹುತಾತ್ಮರಾದ ಘಟನೆಯನ್ನು ಭಾವನಾತ್ಮಕವಾಗಿ ವಿವರಿಸಿದರು. ಒಬ್ಬ ತಾಯಿಯಾಗಿ ಆ ಸನ್ನಿವೇಶವನ್ನು ತಾವು ಎದುರಿಸಿದ ರೀತಿಯ ಬಗ್ಗೆ ಹಾಗೂ ಪ್ರತಿಯೊಬ್ಬ ತಂದೆ ತಾಯಿ ತಮ್ಮ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಎಂಬುದರ ಕುರಿತು‌ ಮಾತನಾಡಿದರು. ‘ಎಲ್ಲಕ್ಕಿಂತಲೂ ದೇಶ ಮಿಗಿಲು’ ಎಂದು ಅವರಾಡಿದ ಮಾತು ಹೃದಯ ತಟ್ಟುವಂತಹದ್ದು. ಇನ್ನು ತಾವು ಆಯೋಜಿಸುತ್ತಿರುವ ಕಾರ್ಯಾಗಾರಗಳ ಬಗ್ಗೆ ಹಾಗೂ ಹುತಾತ್ಮ ಸೈನಿಕರ ಕುಟುಂಬಗಳಿಗೆ ಮೇಜರ್ ಅಕ್ಷಯ್ ಟ್ರಸ್ಟ್ ಮೂಲಕ ನೆರವಾಗುತ್ತಿರುವುದರ ಕುರಿತು ಮಾತನಾಡಿದರು.

ಬಾಗಲಗುಂಟೆಯಲ್ಲಿ ‘ಸ್ತ್ರೀ ಸಾಂತ್ವನ ಕೇಂದ್ರ’ವನ್ನು ನಡೆಸುತ್ತಿರುವ ಅಮೃತಾ ರಾಜ್ ಅವರಿಗೆ ಗೌರವ ಸಮರ್ಪಣೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತಾನಾಡಿದ ಅವರು, ಮಾದಕವ್ಯಸನಿಗಳಿಗೆ, ಮನೋರೋಗಿಗಳಿಗೆ ಹೇಗೆ ಚಿಕಿತ್ಸೆಯನ್ನು ಕೊಡಲಾಗುತ್ತಿದೆ ಎಂಬುದರ ಕುರಿತಾಗಿ ವಿಚಾರಗಳನ್ನು ಹಂಚಿಕೊಂಡರು.

ಸೋದರಿ ನಿವೇದಿತಾ ಪ್ರತಿಷ್ಠಾನದ ಮಾರ್ಗದರ್ಶಕರು ಮತ್ತು ಯುವಾ ಬ್ರಿಗೇಡ್ ನ ಸಂಸ್ಥಾಪಕರೂ ಆಗಿರುವ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಮಾತನಾಡಿ, ಸ್ತ್ರೀ ಶಕ್ತಿ, ಆಕೆಯ ಸೇವಾ ಮನೋಭಾವ ಹಾಗೂ ಸಾಮರ್ಥ್ಯದ ಬಗ್ಗೆ ಮಾತನಾಡಿದರು. ಸೇವಾವೃತ್ತಿಯಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ಹೇಗೆ ಮತ್ತು ಏಕೆ ತೊಡಗಿಸಿಕೊಳ್ಳಬೇಕು ಎಂಬುವುದರ ಬಗ್ಗೆಯೂ ಮಾತನಾಡಿದರು.

ತುಮಕೂರು:
ಇಲ್ಲಿ ನಡೆದ
ಪ್ರಣಾಮ್ ಕಾರ್ಯಕ್ರಮದಲ್ಲಿ
ಅಥಿತಿಗಳಾಗಿ ರಮ್ಯಾ ಕಲ್ಲೂರ್ ಅವರು ಸುದೀರ್ಘವಾಗಿ ಸೋದರಿ ನಿವೇದಿತಾ ತತ್ವಗಳು, ಆದರ್ಶ, ಹೋರಾಟ,‌ ಭಾರತದಲ್ಲಿ ಕೈಗೊಂಡ ಕಾರ್ಯಗಳು ಮತ್ತು ವಿವೇಕಾನಂದರ ಜೊತೆಗಿನ ಇದ್ದಂತಹ ಒಡನಾಟ ಎಲ್ಲವನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು.

ರುದ್ರಭೂಮಿಯ ಉಸ್ತುವಾರಿ ನೋಡಿಕೊಳ್ಳುವ ಯಶೋಧರವರು ತಮ್ಮ ಕೆಲಸದ ಅನುಭವ ಹೇಳಿ ತಮ್ಮ ಕಾರ್ಯದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದರು.
ದ್ವಾರಕಾ ನೆಲೆ ಸಂಸ್ಥೆಯ ಶ್ರೀಮತಿ ವಿಜಯಾ ಅವರಿಗೆ ಗೌರವ ಸಮರ್ಪಣೆ ನಡೆಯಿತು.

ಹುಬ್ಬಳ್ಳಿ ಧಾರವಾಡ:
ಪ್ರಣಾಮ್ ಕಾರ್ಯಕ್ರಮವು ಬೈಕ್ ರ್ರ್ಯಾಲಿ ನಡೆಯಿತು.
ಆಯುರ್ವೇದ ವೈದ್ಯರಾದ ಶೋಭಾ ದಂಪತಿಗಳಿಬ್ಬರೂ ತಮ್ಮ ಕ್ಷೇತ್ರದಲ್ಲಿ ಬಡವರಿಗಾಗಿ ನಿರಂತರ ಉಚಿತ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

KAS ಅಧಿಕಾರಿ ಪ್ರಿಯದರ್ಶಿನಿ ನಿರ್ದೇಶಕರು, ನಿರಾಶ್ರಿತರ ಪರಿಹಾರ ಕೇಂದ್ರ,‌ ರಾಯಾಪುರ, ಇವರು ತಮ್ಮ ಒತ್ತಡದ ಕೆಲಸದ ನಡುವೆಯೂ ತಮ್ಮ ಅಮೂಲ್ಯ ಸಮಯವನ್ನು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ನಮ್ಮಲ್ಲರಿಗೂ ಮಾದರಿಯಾಗಿದ್ದಾರೆ.

ನಿರ್ಮಲಾರವರು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಾ ತಮ್ಮ ಕಷ್ಟದ ಬದುಕಿನಲ್ಲಿಯೂ ಸಮಾಜಕ್ಕಾಗಿ ಬಡವರಿಗಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

ಇವರೆಲ್ಲರ ಸ್ಫೂರ್ತಿದಾಯಕ ಮಾತುಗಳ‌ ಜೊತೆಗೆ ಗೌರವ ಸಮರ್ಪಣೆ ನಡೆಯಿತು.
ಸುಮಾರು ೨೮೦ಮಹಿಳೆಯರು ಈ ಪ್ರೇರಣಾದಾಯಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.


ಮೈಸೂರು:
ಬೆಳವಾಡಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಪ್ರಣಾಮ್ ಕಾರ್ಯಕ್ರಮದಲ್ಲಿ,
ಚಿಗುರು ಆಶ್ರಮದ ಸಂಸ್ಥಾಪಕರಾದ ಸುಷ್ಮಾ ರವಿಕುಮಾರ್ ರವರು ಮಾತನಾಡಿ, ತಮಗೆ ಎದುರಾದ ಸವಾಲುಗಳು ಮತ್ತು ಅದರ ಬಗ್ಗೆ ತಾವು ಕಂಡುಕೊಂಡ ಪರಿಹಾರಗಳನ್ನು ಹಂಚಿಕೊಂಡರು.

ನಂತರ ‘ನಾರಿ’ ಗೃಹೋತ್ಪನ್ನ ಉದ್ಯಮದ ಸಂಸ್ಥಾಪಕರಾದ ಶ್ರೀಮತಿ ಆಶಾರವರು ಆದಿವಾಸಿ ಬುಡಕಟ್ಟು ಜನಾಂಗದ ಹೆಣ್ಣು ಮಕ್ಕಳ ಜೊತೆಯಲ್ಲಿ ಕೆಲಸ ಮಾಡುವಾಗ ತಮಗಾದ ಅನುಭವವನ್ನು ಮತ್ತು ತಾವು ಮುಂದೆ ಮಾಡಬೇಕಾದ ಕೆಲಸಗಳನ್ನು ಹಂಚಿಕೊಂಡರು.

ರುದ್ರಭೂಮಿಯಲ್ಲಿ ಕೆಲಸ ನಿರ್ವಹಿಸುವ ನೀಲಮ್ಮರವರು ಮಾತನಾಡಿ ತಮ್ಮ 30 ವರ್ಷದ ರುದ್ರಭೂಮಿಯಲ್ಲಿನ ಕೆಲಸಗಳು ಮತ್ತು ತಮಗಾದ ಅನುಭವಗಳನ್ನು ಹಂಚಿಕೊಂಡರು.

ಬೆಂಗಳೂರು ಗ್ರಾಮಾಂತರ:
ವಿಜಯಪುರದ ಶ್ರೀ ನಗರೇಶ್ವರ ಪ್ರಾರ್ಥನಾ ಮ೦ದಿರದಲ್ಲಿ ಪ್ರಣಾಮ್ ಕಾರ್ಯಕ್ರಮವು ಸಮಪ೯ಣೆಯ ಭಾವದಿ೦ದ ಸೇವೆಗೆೃದ ಮಹಿಳೆಯರಾದ ಅಕ್ಷತಾ ರೆೃ ಹಾಗೂ ಶ್ರೀಮತಿ ದೀಪಾ ರಮೇಶ್ ಉಪಸ್ಥಿತರಿದ್ದರು.

ಸ್ವಾವಲಂಬನೆ ಬದುಕು ನಡೆಸಲು ಮಹಿಳೆಯರಿಗಾಗಿ ಸೇವೆ ಸಲ್ಲಿಸುತ್ತಿರುವ ಅಕ್ಷತಾ ರೆೃ ತಮ್ಮ ಕಾರ್ಯಕ್ಷೇತ್ರದ ವಿಚಾರ ಹಂಚಿಕೊಂಡು ಸ್ಫೂರ್ತಿ ತುಂಬಿದರು.

ಬಳ್ಳಾರಿ:
ಪ್ರಣಾಮ್ ಕಾರ್ಯಕ್ರಮದಲ್ಲಿ ಸಂಕ್ಷಿಪ್ತ ಭಾಗವತ ಬರಹಗಾರರಾದ, ಶ್ರೀಮತಿ ಕೆ.ಸುಬ್ಬರತ್ನ,
ಸಾಮಾಜಿಕ ಕಾರ್ಯಕರ್ತರು ಹಾಗೂ ವೈದ್ಯೆಯಾಗಿರುವ ಡಾ|ಸಂಗೀತ ಕಟ್ಟಿಮನಿ ಹಾಗೂ ಬಯಲಾಟ ಕಲಾವಿದರಾದ ಎಳ್ಳಾರ್ತಿ ಚಾಮುಂಡೇಶ್ವರಿ ದೇವಿ ಅವರ ಸಾಧನೆಯ ಹಾದಿ ಹಾಗೂ ಪ್ರೇರಣಾದಾಯಕ ಮಾತುಗಳು ಸ್ಫೂರ್ತಿ ನೀಡಿದವು.

ಸ್ವರಾಜ್ಯಕ್ಕೆ_ಮುಕ್ಕಾಲ್ನೂರು