Front Event Inspiration

ಬ್ರಿಟೀಷರ ರುಂಡ ಚೆಂಡಾಡಿದ ಧೀರಮಾತಾ ಉಡಾದೇವಿ!

ಉಡಾದೇವಿ  1857 ರ ಭಾರತೀಯ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಯೋಧರಾಗಿದ್ದು, ಅವಳು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದವಳು. ಉಡಾದೇವಿ ಪಾಸಿ ಸಮುದಾಯದವರಾಗಿದ್ದು, ಉತ್ತರ ಪ್ರದೇಶದ ಲಕ್ನೋದಲ್ಲಿ ಉಜ್ರಿಯಾನ್ ಗ್ರಾಮದಲ್ಲಿ ಜನಿಸಿದರು. ಅವಳು ಜಾಗ್ರಾನಿ ಎಂದೂ ಕರೆಯಲ್ಪಡುತ್ತಿದ್ದಳು ಮತ್ತು ಮಕ್ಕಾ ಪಾಸಿಯನ್ನು ಮದುವೆಯಾದಳು. ಅವಳು ಬೇಗಂ ಹಜರತ್ ಮಹಲ್ನ ಸಹವರ್ತಿಯಾದಳು. ಉಡಾ ಮಹಿಳಾ ಸೈನ್ಯವನ್ನು ರಚಿಸಿದಳು, ಸ್ವತಃ ಕಮಾಂಡರ್ ಆಗಿ! ಚಿನ್ಹಾಟ್ನಲ್ಲಿ ನಡೆದ ಯುದ್ಧದಲ್ಲಿ ಅವಳ ಪತಿ ಹುತಾತ್ಮರಾದರು. ಉಡಾ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು.
ಉಡಾದೇವಿ 1857 ರ ನವೆಂಬರ್‌ನಲ್ಲಿ ಸಿಕಂದರ್ ಬಾಗ್‌ನಲ್ಲಿ ನಡೆದ ಯುದ್ಧದಲ್ಲಿ ಭಾಗವಹಿಸಿದರು. ಆಗಿನ ಬ್ರಿಟೀಷ್ ಪತ್ರಕರ್ತರೊಬ್ಬರು  ಉಡಾದೇವಿಯ ಬಗ್ಗೆ ಬರೆಯುತ್ತಾರೆ: “ಅವಳು ಒಂದು ಜೋಡಿ ಹಳೆಯ ಮಾದರಿಯ ಅಶ್ವದಳದ ಪಿಸ್ತೂಲ್‌ಗಳನ್ನು ಹೊಂದಿದ್ದಳು. ಅದರಲ್ಲಿ ಒಂದು ಅವಳ ಬೆಲ್ಟ್ ನಲ್ಲಿ ಲೋಡ್ ಮಾಡಲಾಗಿತ್ತು ಮತ್ತು ಅವಳ ಚೀಲ ಇನ್ನೂ ಅರ್ಧದಷ್ಟು ಮದ್ದುಗುಂಡುಗಳನ್ನು ತುಂಬಿತ್ತು. ಆದರೆ ಮರದ ಮೇಲೆ ಹತ್ತಿ  ಎಚ್ಚರಿಕೆಯಿಂದ ದಾಳಿಮಾಡಲು ಎಲ್ಲವನ್ನು ಸಿದ್ಧಪಡಿಸಿದಳು. ಮರದ ಮೇಲಿನಿಂದ ಒಬ್ಬೊಬ್ಬರನ್ನೆ ಹೊಡೆದುರುಳಿಸಲು ಪ್ರಾರಂಭಿಸಿದಳು. ಈ ರೀತಿ ತನ್ನ ಗುಂಡುಗಳೆಲ್ಲ ಖಾಲಿಯಾಗುವವರೆಗೂ ಎಲ್ಲರನ್ನೂ ಕೊಲ್ಲುತ್ತಾ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತನ್ನ ಸೇವೆ ಸಲ್ಲಿಸಿದಳು” ಎಂದು!
ಬ್ರಿಟೀಷ್ ಅಧಿಕಾರಿಗಳು ಅವರ ಸೈನಿಕರ ಮೃತದೇಹವನ್ನು ನೋಡಿ ಪರಿಶೀಲಿಸಿದಾಗ ಇದು ಮೇಲಿನಿಂದ ಹೊಡೆದ ಗುಂಡು ಎಂಬ ವಿಷಯ ತಿಳಿದು ಬಂದಿತು. ಆಗ ಇದು ಭಾರತೀಯ ಸೇನೆಯೆ ಯಾರೋ ಧೀರರೇ ಮಾಡಿದ್ದಾರೆ ಎಂಬ ಚಿಂತೆ ಬ್ರಿಟೀಷರಿಗೆ ಕಾಡಲಾರಂಭಿಸಿತು. ಆ ಸಮಯದಲ್ಲಿ ಗುಪ್ತಚರರ ಮೂಲಕ ಇದು ಉಡಾದೇವಿ ಮಾಡಿದ ಕೃತ್ಯ ಎಂಬುದು ಗೊತ್ತಾಯಿತು ಕೂಡ. ಪಾಪಿ ಬ್ರಿಟೀಷ್ ಸರ್ಕಾರ ಅವಳನ್ನು ಮೋಸದಿಂದ ಕೊಂದರು. ತನ್ನ ಪ್ರಾಣಪಕ್ಷಿಯು ಹಾರಿ ಹೋದರೂ ಅದು ಭಾರತಕ್ಕಾಗಿ, ಭಾರತದ ಸೇವೆ ಮಾಡುತ್ತಾ ಹೋಗಬೇಕು ಎಂದು ಅಪೇಕ್ಷಿಸಿದವಳು ಉಡಾದೇವಿ. ಒಬ್ಬ ಸಾಮಾನ್ಯ ಮನೆಯ ಒಂದು ಪುಟ್ಟ ಸಮುದಾಯದ ಹೆಣ್ಣಾದರೂ ಆಕೆಯ ಸಾಹಸ ತ್ಯಾಗ ಅಪಾರವಾದುದ್ದು!