Inspiration

ಭೀಮಾಬಾಯಿ ಹೋಳ್ಕರ್

ಬ್ರಿಟಿಷರ ವಿರುದ್ದ ಖಡ್ಗ ಅಥವಾ ಶಸ್ತ್ರ ಪ್ರಯೋಗಿಸಿದ ಭಾರತದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

ಭೀಮಾಬಾಯಿ ಅಹಲ್ಯಾಬಾಯಿ ಹೋಳ್ಕರ ಮೊಮ್ಮಗಳು ಮತ್ತು ಇಂದೋರ್‌ನ ಮಹಾರಾಜ ಯಶವಂತರಾವ್ ಹೋಳ್ಕರರ ಪುತ್ರಿಯಾಗಿ ಸೆಪ್ಟೆಂಬರ್ ೧೭, ೧೭೯೫ ರಲ್ಲಿ ಜನಿಸಿದರು. ಬಾಲ್ಯದಿಂದಲೇ ಭೀಮಾಬಾಯಿಗೆ ಶೌರ್ಯ, ಸಾಹಸ ಗುಣಗಳು ರಕ್ತಗತವಾಗಿ ಮನೆತನದಿಂದಲೇ ಬಂದಿತ್ತು. ಆಕೆ ಸೈನ್ಯ ತರಬೇತಿ ಪಡೆದದ್ದಷ್ಟೇ ಅಲ್ಲದೆ ಗೆರಿಲ್ಲಾ ಯುದ್ಧ ತಂತ್ರವನ್ನು ಕರಗತ ಮಾಡಿಕೊಂಡಿದ್ದಳು.

ಭೀಮಾಬಾಯಿ ಬಾಲ್ಯದಲ್ಲೇ ತನ್ನ ಪತಿಯನ್ನು ಕಳೆದುಕೊಂಡು ಮುಂದಿನ ಜೀವನವೆಲ್ಲ ವಿಧವೆಯಾಗಿ ಕಳೆಯಬೇಕಾಯಿತು. ಅಲ್ಲದೇ ಬಹುಬೇಗ ತಂದೆ ಯಶವಂತ ರಾವ್ ಮರಣ ಹೊಂದಿದರು. ಈ ಮಧ್ಯೆ ಬ್ರಿಟಿಷರು ಇಂದೋರ್ ರಾಜ್ಯವನ್ನು ವಶಪಡಿಸಿಕೊಳ್ಳಲು ಸಂಚು ಹೂಡುತ್ತಿದ್ದಾರೆ ಎಂದು ತಿಳಿದ ಭೀಮಾಬಾಯಿ ರಕ್ತ ಮತ್ತು ಬೆವರು ಹರಿಸಿ ಸಮೃದ್ಧ ರಾಜ್ಯ ಕಟ್ಟಿದ ಹೋಳ್ಕರ ಮನೆತನವನ್ನು ನೆನೆದು ರಾಜ್ಯವನ್ನು ಬ್ರಿಟಿಷರಿಂದ ರಕ್ಷಿಸಬೇಕೆಂದು ಪಣ ತೊಟ್ಟಳು.

ಡಿಸೆಂಬರ್೨೧,೧೮೧೯ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯ ಸರ್ ಥಾಮಸ್ ಹಿಪ್ಲೋಪನ ನೇತೃತ್ವದಲ್ಲಿ ಇಂದೋರ್ ರಾಜ್ಯದ ಮಹಿದಪೂರ ಮೇಲೆ ಆಕ್ರಮಣ ಮಾಡಿತು. ಇಂದೋರ್ ರಾಜ ಮಲ್ಹಾರರಾವ್ ಹೋಳ್ಕರ ೧೧ ವರ್ಷದ ಬಾಲಕನಾಗಿದ್ದರಿಂದ ಸಹೋದರಿ ಭೀಮಾಬಾಯಿ ಯುದ್ಧ ಯೋಜನೆ ರೂಪಿಸಿ ರೋಷನ್‌ ಬೇಗ್ ನ ಸಾರಥ್ಯದಲ್ಲಿ ೬೩ ತೋಪುಗಳೊಂದಿಗೆ ಪ್ರತಿದಾಳಿ ಮಾಡಿದಳು. ಅಲ್ಲದೆ ರಣಭೂಮಿಯಲ್ಲಿ ಅಶ್ವಾರೂಢಿಯಾಗಿ ಒಂದು ಕೈಯಲ್ಲಿ ಭರ್ಜಿ ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದು ವೀರಾವೇಷದಿಂದ ಹೋರಾಡಿದಳು. ಬ್ರಿಟಿಷ ಕರ್ನಲ್ ಮಾಲ್ಕಮ್ ನನ್ನು ಗೆರಿಲ್ಲಾ ತಂತ್ರದಿಂದ ಹೊಡೆದುರಳಿಸಿದಳು. ಒಂದು ಹಂತದಲ್ಲಿ ಬ್ರಿಟಿಷರು ಸೋಲಿನ ಅಂಚಿನಲ್ಲಿ ಬಂದು ತಲುಪಿದರು. ಆದರೆ ಹೋಳ್ಕರ ಸೈನ್ಯದಲ್ಲಿದ್ದ ಅಪ್ರಾಮಾಣಿಕ ಗಫೂರ ಖಾನ್ ನ ಸಹಾಯದಿಂದ ಬ್ರಿಟಿಷರು ಹೋಳ್ಕರರನ್ನು ಪರಾಭವಗೊಳಿಸಿದರು. ಈ ರೀತಿ ಬ್ರಿಟಿಷರು ಒಂದೊಂದೇ ಪ್ರದೇಶಗಳನ್ನು ಗಳಿಸಿ ಇಡೀ ಇಂದೋರ್ ರಾಜ್ಯವನ್ನು ವಶಪಡಿಸಿಕೊಂಡರು. ಆದರೆ ಭೀಮಾಬಾಯಿ ತನ್ನ ಕೊನೆ ಉಸಿರು ಇರುವವರೆಗೂ ಶೌರ್ಯದಿಂದ ಹೋರಾಡಿ ನವೆಂಬರ್ ೨೮,೧೮೫೮ ರಲ್ಲಿ ಮರಣ ಹೊಂದಿದಳು.

#ಮಹಾ_ಮಹಿಳೆ