Inspiration

ಸೋದರಿ ನಿವೇದಿತಾ ಪ್ರತಿಷ್ಠಾನದ ಬೇಸಿಗೆ ಶಿಬಿರಗಳು!

ಮಾರ್ಚ್ 25ದೀಕ್ಷಾ ದಿವಸದಭರ್ಜರಿ ಕಾರ್ಯಕ್ರಮಗಳ ಪ್ರತಿಫಲ ಬೇಸಿಗೆ ಶಿಬಿರಗಳು. ಮಕ್ಕಳ ಶಾಲೆ ಮುಗಿದಿತ್ತು, ಏಪ್ರಿಲ್ ತಿಂಗಳ ಪ್ರಖರ ಸೂರ್ಯನ ಶಾಖ ಅವರನ್ನು ಹೊರಗೆ ಬರದಂತೆ ಮಾಡಿತ್ತು. ಎಲ್ಲಾ ಕಡೆಗಳಲ್ಲಿ ಬೇಸಿಗೆ ಶಿಬಿರಗಳು ಮಕ್ಕಳನ್ನು ಆಕರ್ಷಿಸುತ್ತಿದ್ದವು. ಆದರೆ ಶಿಬಿರಗಳ ಪ್ರವೇಶಕ್ಕೆ ದೊಡ್ಡ ಮೊತ್ತ ತೆತ್ತಬೇಕು! ಎಲ್ಲರಿಗೂ ಇದನ್ನು ಭರಿಸಲು ಸಾಧ್ಯವಿಲ್ಲ, ಹೀಗಿರುವಾಗ ನಮ್ಮಸೋದರಿ ನಿವೇದಿತಾ ಪ್ರತಿಷ್ಠಾನರಾಜ್ಯದ ಎಲ್ಲಾ ಭಾಗಗಳಲ್ಲೂ ಉಚಿತ ಬೇಸಿಗೆ ಶಿಬಿರ ಪ್ರಾರಂಭಿಸಿತು.

ನಮ್ಮ ಶಿಬಿರಗಳು ಹೇಗಿತ್ತೆಂದರೆಸ್ಲಂಗಳಲ್ಲಿ ವಾಸಿಸುವ ಮಕ್ಕಳ ಬಳಿ ಹೋಗಿ ಅಲ್ಲಿಯೇ ಇದ್ದ ದೇವಸ್ಥಾನದ ಅಂಗಳ, ಸರಕಾರಿ ಶಾಲೆಗಳನ್ನು ಶಿಬಿರದ ಕೇಂದ್ರವಾಗಿ ಮಾಡಿಕೊಂಡು ಯೋಗ, ಧ್ಯಾನ, ನಿತ್ಯ ಪಠಿಸುವ ಶ್ಲೋಕಗಳು, ಕರಕುಶಲ ವಸ್ತುಗಳ ತಯಾರಿಕೆ ಜೊತೆಗೆ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವಂತಹ ಕಥೆಗಳು ದೇಶಭಕ್ತರ ಆತ್ಮಚರಿತ್ರೆ ಪರಿಚಯಿಸುವುದು, ದೇಶಭಕ್ತಿ ಗೀತೆಗಳನ್ನು ಕಲಿಸುವುದು, ಕಿರು ನಾಟಕಗಳನ್ನು ಕಲಿಸುವುದು, ಹಳೆಯ ಗ್ರಾಮೀಣ ಆಟಗಳನ್ನು ಆಡಿಸುವುದು ಹಾಗೂ ಸುತ್ತಲಿನ ಪರಿಸರದ ಸ್ವಚ್ಛತೆಯ ಬಗ್ಗೆ ಕಾಳಜಿ ಹೆಚ್ಚುವಂತೆ ತಿಳಿಸಲಾಯಿತು. ಜೊತೆಗೆ ಬಾಲಾಪರಾಧ ಕುರಿತ ಕಾಯಿದೆಗಳ ಬಗ್ಗೆ ಹಾಗೂ ಪರಿವರ್ತನ ಕೇಂದ್ರಗಳ ಮೂಲಕ ಮಕ್ಕಳಿಗೆ ಕೊಡುತ್ತಿರುವ ಸೌಲಭ್ಯದ ಬಗ್ಗೆ ಮನವರಿಕೆ ಮಾಡಲಾಯಿತು. ಮಕ್ಕಳ ವ್ಯಕ್ತಿತ್ವ ವಿಕಸನದ ಬಗ್ಗೆ ಎಲ್ಲಾ ಕಡೆ ಹೆಚ್ಚು ಒತ್ತು ಕೊಡಲಾಗಿತ್ತು. ಅನುಕೂಲ ವಂಚಿತ ಮಕ್ಕಳು ದೇಶಕ್ಕೆ ಭಾರವಾಗದೆ ಮುಂದೆ ಸತ್ಪ್ರಜೆಗಳಾಗಿ ಹೊರಬರಬೇಕೆಂಬುದು ಬೇಸಿಗೆ ಶಿಬಿರಗಳ ಮೂಲ ಉದ್ದೇಶವಾಗಿತ್ತು.

ಅವರಿರುವಲ್ಲಿಗೇ ಹೋಗಿ ಶಿಬಿರ ನಡೆಸಿದ್ದರಿಂದ ಅಲ್ಲಿಯ ಪೂರ್ಣ ಚಿತ್ರಣದ ಅನುಭವ ನಮಗಾಯಿತು. ಮಕ್ಕಳಲ್ಲಿ ಮುಗ್ಧತೆ ಇದೆ, ಕೇಳುವ ತಾಳ್ಮೆಯೂ ಇದೆ. ಅವರಿಗೆ ಸರಿಯಾದ ಮಾರ್ಗದರ್ಶನ ಬೇಕು. ನಾಲ್ಕು ಐದು ದಿನಗಳ ಅಥವಾ ಒಂದು ವಾರದ ಶಿಬಿರದಿಂದ ಪರಿವರ್ತನೆ ಸಾಧ್ಯವಿಲ್ಲ. ಆದ್ದರಿಂದ ಮುಂದೆಯೂ ವಾರಕ್ಕೊಮ್ಮೆಯಾದರೂ ಜಾಗಗಳಿಗೆ ಭೇಟಿನೀಡಿ ಅವರೊಟ್ಟಿಗಿನ ಸಂಬಂಧವನ್ನು ಮುಂದುವರಿಸಬೇಕೆಂದು ಪ್ರತಿಷ್ಠಾನ ನಿರ್ಧರಿಸಿದೆ.

ಇದಲ್ಲದೇ ಪ್ರತಿಷ್ಠಾನದ ಸೋದರಿಯರು ಕೆಲವು ಸಂಘ ಸಂಸ್ಥೆಗಳು ನಡೆಸುತ್ತಿರುವ ಬೇಸಿಗೆ ಶಿಬಿರಗಳಿಗೆ ಭೇಟಿ ಇತ್ತು ಕಾರ್ಯಕ್ರಮಗಳನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇನ್ನೂ ಹಲವಾರು ಕಡೆಗಳಲ್ಲಿ ಶಿಬಿರ ಮುಂದುವರೆದಿದೆ. ಪ್ರತಿಷ್ಠಾನದ ಸೋದರಿಯರು ತಮ್ಮ ತನು, ಮನ, ಧನಗಳನ್ನು ವಿನಿಯೋಗ ಮಾಡಿ ಬಹಳ ಶ್ರದ್ಧೆಯಿಂದ ಬೇಸಿಗೆ ಶಿಬಿರ ನಡೆಸಿದ್ದಾರೆ. ಇದೇ ಉತ್ಸಾಹ ಮುಂದುವರೆಯಲಿ. ದೀಕ್ಷಾದಿನದ ಪ್ರತಿಜ್ಞೆ ನಮ್ಮನ್ನು ಎಚ್ಚರಿಸುತ್ತಿರಲಿ.