Nivedita

ಅಕ್ಕ ನಿವೇದಿತಾ ಎಲ್ಲರಲ್ಲೂ ಶಕ್ತಿಯಾಗಿ ಹರಿಯಲಿ!

ಅಕ್ಕ ನಿವೇದಿತಾ ಯಾರಿಗೆ ತಾನೆ ಸ್ಫೂರ್ತಿ ಅಲ್ಲ ಹೇಳಿ. ಭಾರತದ ಪ್ರತಿಯೊಂದು ವರ್ಗದ ಜನರ ಸಂಪರ್ಕದಲ್ಲಿದ್ದಾಕೆ ಅಕ್ಕ. ಪ್ರತಿಷ್ಠಿತ ಠಾಗೋರ್ ಮನೆತನದಿಂದ ಹಿಡಿದು ಬೆಸ್ತರ ಬಸ್ತಿಯವರೆಗೂ ಆಕೆ ಕೆಲಸ ಮಾಡಿದ್ದಾಳೆ. ಸ್ವಾತಂತ್ರ್ಯ ಹೋರಾಟಕ್ಕೆ ನಿಂತ ಅಹಿಂಸಾವಾದಿಗಳಿಂದ ಹಿಡಿದು ರೆವಲ್ಯೂಷನರಿಗಳವರೆಗೆ ಎಲ್ಲರಿಗೂ ಪ್ರೇರಣೆ ನೀಡಿದ್ದಾಳೆ. ವಿಜ್ಞಾನಿಯಾದ ಜಗದೀಶ್ ಚಂದ್ರ ಬೋಸ್ ನಿಂದ ಕವಿಯಾದ ಸುಬ್ರಹ್ಮಣ್ಯ ಭಾರತಿಯವರೆಗೆ ಎಲ್ಲರಿಗೂ ದಾರಿ ತೋರುವ ಗುರುವಾಗಿದ್ದಾಳೆ. ಕೆಲವರಿಗೆ ಪ್ರೇರಣೆ ನೀಡಿದರೆ ಹಲವರಿಗೆ ತಾನೇ ಸವೆದು ಸೇವೆ ಸಲ್ಲಿಸಿದ್ದಾಳೆ.

ಅಕ್ಕ ನಿವೇದಿತಾ ಎಲ್ಲರಲ್ಲೂ ಶಕ್ತಿಯಾಗಿ ಹರಿಯಲಿ ಎಂದು ಹೆಚ್ಚಿನ ಜನರನ್ನು ತಲುಪುವ ಯೋಜನೆಯನ್ನು ಸೋದರಿ ನಿವೇದಿತಾ ಪ್ರತಿಷ್ಠಾನದ ಸೋದರಿಯರು ಹಾಕಿಕೊಂಡೆವು. ಮಾಧ್ಯಮಗಳ ಮೂಲಕ ನಾವು ಮನೆಮನೆಗೆ ಅಕ್ಕನನ್ನು ಕರೆದೊಯ್ಯಬಹುದು ಎಂದೆನಿಸಿ ಆಕಾಶವಾಣಿ ಶಿವಮೊಗ್ಗ, ಮಂಗಳೂರು ಹಾಗೂ ಕೆ.ಎಲ್. ಅವರ ಧ್ವನಿ ರೆಡಿಯೋ, ಸರಳ ಜೀವನ ಟಿವಿ ಚ್ಯಾನಲ್‌, ನ್ಯೂಸ್ ಅವರ್ 13 ಮುಂತಾದ ಮಾಧ್ಯಮಗಳ ಮೂಲಕ ಕಾರ್ಯಕ್ರಮ ನೀಡಿದೆವು. ಸತತವಾಗಿ 6 ತಿಂಗಳುಗಳ ಕಾಲ ಅಕ್ಕನ ಜೀವನದ ವಿಶೇಷ ಘಟನೆಗಳನ್ನು ರೇಡಿಯೋ ಮೂಲಕ ಪ್ರಸಾರ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಕೆ.ಎಲ್.. ಅವರ ಧ್ವನಿ ರೆಡಿಯೋ ಮೂಲಕ ಯುವ ಪೀಳಿಗೆಗೆ ಪ್ರತಿ ವಾರ ಅಕ್ಕನ ಜೀವನದ ಮುಖ್ಯ ಘಟನೆಗಳನ್ನು ಸಂಭಾಷಣೆ ಮೂಲಕ ಹೇಳುವುದು, ನ್ಯೂಸ್ ಅವರ್ 13 ಮತ್ತು ಶಿವಮೊಗ್ಗದ ಪತ್ರಿಕೆ ಮಲೆನಾಡು ಮಿತ್ರದಲ್ಲಿ ಪ್ರತಿ ದಿನ ಒಂದು ಅಕ್ಕ ಸುಭಾಷಿತ ಪಕಟಿಸಲಾಗುತ್ತಿದೆ.

ಮಹತ್ತರದ ಉದ್ದೇಶ ಸಾಕಾರಗೊಳ್ಳುವಲ್ಲಿ ನಮ್ಮ ಪರಿಶ್ರಮ ಎಷ್ಟಿದೆಯೋ ಅದರ ಎರಡು ಪಟ್ಟು ನಮಗೆ ಸಹಕರಿಸಿದ ಹಿರಿಯರ ವಿಶ್ವಾಸ ಹಾಗೂ ಆಶಿರ್ವಾದ ಇದೆ. ಅವರೆಲ್ಲರಿಗೂ ನಮ್ಮ ಹೃದಯ ಪೂರ್ವಕ ಧನ್ಯವಾದಗಳು.

Tags