On Ground

ಈ ಸಂಘಟನೆಯಲ್ಲಿ ಹೆಣ್ಣುಮಕ್ಕಳದ್ದೇ ಪಾರುಪತ್ಯ!

ಮಹಿಳಾವಾದಕ್ಕೆ ಜಾಗತಿಕ ಮಟ್ಟದಲ್ಲಿ ಇರುವ ಅರ್ಥ ಪುರುಷರಿಗಿಂತ ಸ್ತ್ರೀಯರು ಮೇಲು ಎಂದು ತೋರಿಸುವ ಪ್ರಯತ್ನ. ಅಥವಾ ಹುಡುಗರು ಅನುಭವಿಸಬಹುದಾದ್ದೆಲ್ಲವನ್ನೂ ಹೆಣ್ಣುಮಕ್ಕಳೂ ಅನುಭವಿಸುವುದೇ ಇಂದಿನ ಕಲ್ಪನೆಯ ಸ್ತ್ರೀವಾದ. ಇದಕ್ಕೆ ಪೂರಕವಾದ, ಪ್ರೇರಕವಾದ ಸಂಗತಿಗಳನ್ನು ಮುಂಚೂಣಿಗೆ ಬರುವಂತೆ ಮಾಡುವಲ್ಲಿ ಎಡಪಂಥೀಯ ಬುದ್ಧಿಜೀವಿಗಳು, ಪತ್ರಕರ್ತರು, ಲೇಖಕರು ಕೊನೆಗೆ ಇತಿಹಾಸಕಾರರೂ ಕೂಡ ಸಾಕಷ್ಟು ಶ್ರಮಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೆಲವು ಸಿನಿಮಾ ತಾರೆಯರೂ ಈ ಸಾಲಿಗೆ ಜೋಡಿಸಿಕೊಂಡ ಮೇಲೆ ಸ್ತ್ರೀವಾದವೆನ್ನುವುದು ಪುರುಷರ ವಿರುದ್ಧ ಕೂಗಾಡುವುದು ಎಂಬುದಕ್ಕೇ ಸೀಮಿತವಾಗಿದೆ ಅಥವಾ ಸ್ಪಷ್ಟವಾಗಿ ಹೇಳಬೇಕೆಂದರೆ ಹಿಂದೂಧರ್ಮದ ಆಚರಣೆಗಳನ್ನು ಧಿಕ್ಕರಿಸುವುದೇ ಆಧುನಿಕ ಸ್ತ್ರೀವಾದದ ಅಡಿಪಾಯವಾಗಿದೆ.

ಹಾಗೆ ನೋಡಿದರೆ, ಪುರುಷಪ್ರಾಧಾನ್ಯ ಚಿಂತನೆಯನ್ನು ಎದುರಿಸಿ ನಿಂತು ತನಗಾದ ಕಷ್ಟಗಳನ್ನು ಸಮಾಜದ ಮುಂದೆ ಬಿಚ್ಚಿಟ್ಟು ಕಾಣೆಯಾಗಿ ಹೋದ ಸೀತೆ ಭಾರತೀಯ ಸ್ತ್ರೀವಾದದ ಪ್ರಖರ ನಾಯಕಿ. ರಾಮ ಆಕೆಗೆ ಅಗ್ನಿಪರೀಕ್ಷೆಯನ್ನು ಮಾಡಿಸಿದಾಗಲೂ ಆಕೆ ಕೋಪಿಸಿಕೊಂಡವಳಲ್ಲ. ಆಕೆಗಾದ ಮಾನಸಿಕ ಆಘಾತದ ಕುರಿತಂತೆ ಅರಿವಿದ್ದ ರಾಮ ಪಟ್ಟಕ್ಕೆ ಬಂದ ನಂತರ ಕೆಲವು ವರ್ಷಗಳ ಕಾಲ ಆಕೆಯೊಂದಿಗೆ ಸರಸ-ಸಲ್ಲಾಪಗಳಲ್ಲಿ, ಸುತ್ತಾಟಗಳಲ್ಲಿ ಕಾಲ ಕಳೆದ. ಲೋಕದ ಕಣ್ಣಲ್ಲಿ ಸೀತೆಯನ್ನು ಪವಿತ್ರಳಾಗುಳಿಸುವ ತನ್ನ ಪ್ರಯತ್ನ ಆಕೆಯ ದೃಷ್ಟಿಯಿಂದ ಬಲು ಕೆಟ್ಟದ್ದೆನ್ನುವುದನ್ನು ಅರಿತಿದ್ದ ಆತ ಸೀತೆಯನ್ನು ಸಂತುಷ್ಟವಾಗಿರಿಸುವ ಪ್ರಯತ್ನ ಖಂಡಿತ ಮಾಡಿದ. ಆದರೆ ತುಂಬು ಗಭರ್ಿಣಿಯಾದ ಆಕೆಯನ್ನು ಪ್ರಜೆಗಳ ಮಾತಿಗೆ ಕಟ್ಟುಬಿದ್ದು ಕಾಡಿಗೆ ಓಡಿಸಬೇಕಾಗಿ ಬಂತಲ್ಲ ಅದನ್ನು ಸರಿಪಡಿಸಿಕೊಳ್ಳುವ ಹೊತ್ತು ಬಂದಾಗ ಸೀತೆಯೇ ಅದಕ್ಕೆ ಆಸ್ಪದ ಕೊಡಲಿಲ್ಲ. ಪುರುಷಪ್ರಧಾನವಾದ ಸಮಾಜವನ್ನು ಧಿಕ್ಕರಿಸಿ ಆಕೆ ಭೂಮಿಗೆ ಸೇರಿಹೋದಳು. ವೇದಕಾಲದ ಗಾಗರ್ಿ ಯಾಜ್ಞ್ಯವಲ್ಕ್ಯರನ್ನು ತುಂಬಿದ ಸಭೆಯಲ್ಲಿ ಪ್ರಶ್ನೆ ಮಾಡುವ ಛಾತಿ ತೋರುತ್ತಾಳಲ್ಲಾ ಅದೂ ಕೂಡ ಭಾರತೀಯ ಸ್ತ್ರೀವಾದದ ಪ್ರಖರ ದರ್ಶನವೇ!

ಸಾಂಸ್ಕೃತಿಕ ಆಕ್ರಮಣಕ್ಕೆ ಒಳಗಾದಂತೆ ನಮ್ಮಲ್ಲಿ ನುಸುಳಿದ ಕಾಲದ ಕಟ್ಟುಪಾಡುಗಳನ್ನು ಹಿಂದೂಧರ್ಮವೆಂದೇ ಭಾವಿಸಿದ ಅನೇಕರು ಅದರ ವಿರುದ್ಧ ಹೋರಾಡುವ ನೆಪದಲ್ಲಿ ಸ್ತ್ರೀವಾದವನ್ನು ಅಸ್ತ್ರವಾಗಿ ಬಳಸಿಕೊಂಡರು. ಬದಲಾದ ಹೊಸ ಕಾಲಮಾನದಲ್ಲಿ ಈ ಸ್ತ್ರೀವಾದವನ್ನು ಬದಿಗೆ ಸರಿಸಿ ಭಾರತೀಯ ಚಿಂತನೆಯ ಆಧಾರದ ಮೇಲೆ ಅದನ್ನು ಪುನರ್ರೂಪಿಸಿಕೊಟ್ಟ ಶ್ರೇಯ ನಿಸ್ಸಂಶಯವಾಗಿ ಅಕ್ಕ ನಿವೇದಿತೆಗೆ ಸಲ್ಲುತ್ತದೆ. ಸ್ವಾಮಿ ವಿವೇಕಾನಂದರಿಂದ ಪ್ರೇರಣೆ ಪಡೆದ ನಿವೇದಿತೆ ತನ್ನ ದೇಶವನ್ನು ಬಿಟ್ಟು ಭಾರತಕ್ಕೆ ಬಂದಾಗ ಪಶ್ಚಿಮದ ಶೈಲಿಯ ಸ್ತ್ರೀತ್ವದ ಚಿಂತನೆಗೆ ಒಗ್ಗಿದ್ದವಳು. ಇಲ್ಲಿಗೆ ಬಂದು ಭಾರತೀಯ ಸಂಸ್ಕೃತಿಯನ್ನು, ಇಲ್ಲಿನ ಜನರನ್ನು ಅಪ್ಪಿಕೊಳ್ಳುವಾಗ ಆಕೆ ಅವೆಲ್ಲವನ್ನೂ ಬಲಿಕೊಡಬೇಕಾಗಿತ್ತು. ಇಲ್ಲಿನ ನೆಲದೊಳಗೆ ಅಡಗಿದ್ದ ಶಕ್ತಿಯನ್ನು ಗುರುತಿಸಿಯೇ ಆಕೆ ಅವೆಲ್ಲಕ್ಕೂ ಸಿದ್ಧಳಾದಳು. ಯಾವುದನ್ನು ಇಂದಿನ ಸ್ತ್ರೀವಾದ ವಿರೋಧಿಸುತ್ತದೆಯೋ ಅವೆಲ್ಲವನ್ನೂ ತನ್ನದಾಗಿಸಿಕೊಂಡಳು. ಕಠಿಣ ತಪಸ್ಸಿಗೆ ತನ್ನನ್ನು ಒಡ್ಡಿಕೊಂಡಳು. ವಿವೇಕಾನಂದರನ್ನು ಗುರುವಾಗಿ ಸ್ವೀಕರಿಸಿ ಅವರ ಮಾತಿಗೆ ತಕ್ಕಂತೆ ನಡೆದಳು. ಕೊನೆಗೆ ಹಿಂದೂಪರವಾದ ಎಲ್ಲ ವಿಚಾರಧಾರೆಗಳನ್ನು ಕಣ್ಮುಚ್ಚಿ ಸ್ವೀಕರಿಸಿದಳು!

ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಅದೇ ಅಕ್ಕ ನಿವೇದಿತೆಯ ಹೆಸರಲ್ಲಿ ರೂಪುಗೊಂಡ ಸೋದರಿ ನಿವೇದಿತಾ ಪ್ರತಿಷ್ಠಾನಕ್ಕೆ ನಾಡಿದ್ದು 27ಕ್ಕೆ ಭತರ್ಿ ಐದು ತುಂಬುತ್ತದೆ. ಯುವಾಬ್ರಿಗೇಡ್ನ ಸೋದರಿ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವ ಪ್ರತಿಷ್ಠಾನ ಸ್ವಾಮಿ ವಿವೇಕಾನಂದರ ಕಲ್ಪನೆಯಂತೆ ರೂಪುಗೊಂಡಿದೆ. ಸ್ವಾಮೀಜಿ ಹೇಳುತ್ತಾರಲ್ಲಾ, ‘ಹೆಣ್ಣುಮಕ್ಕಳ ಅಭ್ಯುದಯ ಎಂದರೆ ಅವರಿಗೆ ಶಿಕ್ಷಣ ಕೊಟ್ಟು ಮುನ್ನುಗ್ಗಲು ವ್ಯವಸ್ಥೆ ಮಾಡಿಕೊಡುವುದಷ್ಟೇ. ಅಲ್ಲೆಲ್ಲೂ ಪುರುಷರು ಮಧ್ಯೆ ತಲೆಹಾಕುವ ಅಗತ್ಯವೇ ಇಲ್ಲ. ಮಹಿಳೆಯರು ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳಬಲ್ಲರು’. ಅಕ್ಷರಶಃ ನಿಜವಲ್ಲವೇ. ಹೆಣ್ಣುಮಕ್ಕಳೆಂದರೆ ಕೈಲಾಗದವರು, ಕಠಿಣ ಕೆಲಸ ಮಾಡಲಾಗದವರು ಎಂದೆಲ್ಲಾ ಅನೇಕ ಶತಮಾನಗಳಿಂದ ನಾವು ನಂಬಿಕೊಂಡು ಬಂದುಬಿಟ್ಟಿದ್ದೇವೆ. ಮಗುವನ್ನು ಹೆರುವಾಗಿನ ನೋವನ್ನು ಅನುಭವಿಸಬಲ್ಲ ಹೆಣ್ಣುಮಗಳೊಬ್ಬಳು ಸಾಮಾನ್ಯವಾದ ಕಷ್ಟವನ್ನು ಎದುರಿಸಳಾರಲೆಂದು ಅದು ಹೇಗೆ ನಾವೆಲ್ಲ ನಿರ್ಧರಿಸಿಬಿಟ್ಟೆವು ದೇವರೇ ಬಲ್ಲ! ಇದನ್ನು ವಿರೋಧಿಸಿಯೇ ಸ್ವಾಮಿ ವಿವೇಕಾನಂದರು ಶಾರದಾಮಾತೆಯವರ ಹೆಸರಲ್ಲಿ ಹೆಣ್ಣುಮಕ್ಕಳಿಗಾಗಿಯೇ ಮಠ ಸ್ಥಾಪಿಸಬೇಕೆಂದು ನಿಶ್ಚಯಿಸಿದ್ದು. ಪ್ರತಿಷ್ಠಾನವೂ ಹಾಗೆಯೇ. ಅಕ್ಕ ನಿವೇದಿತೆಯ ಆದರ್ಶಗಳ ಮೇಲೆ ತಮ್ಮನ್ನು ತಾವೇ ರೂಪಿಸಿಕೊಳ್ಳುತ್ತಾ ಮುನ್ನಡೆಯುತ್ತಿರುವ ಹೆಣ್ಣುಮಕ್ಕಳ ತಂಡ. ಇಂದು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನೂರಾರು ಕಾರ್ಯಕರ್ತರ ಮೂಲಕ ಬೆಳೆದುನಿಂತಿರುವ ಈ ಪ್ರತಿಷ್ಠಾನ ಬಹುಮುಖಿ ಕೆಲಸಗಳನ್ನು ಮಾಡುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಸ್ವಾತಂತ್ರ್ಯವೀರರ ಕುರಿತಂತೆ ವಿಡಿಯೊ ಪ್ರದರ್ಶನ ಮಾಡುವುದರಿಂದ ಹಿಡಿದು ಸ್ವಚ್ಛಮನಸ್ಸು ಎಂಬ ಹೆಸರಿನಡಿಯಲ್ಲಿ ನಮ್ಮ-ನಿಮ್ಮೆಲ್ಲರ ದೃಷ್ಟಿಯಲ್ಲಿ ಸ್ಲಂಗಳೆಂದು ಕರೆಸಿಕೊಳ್ಳಲ್ಪಡುವ ಸ್ಥಳಗಳ ಮಕ್ಕಳಿಗೆ ಸಂಸ್ಕಾರ ಶಿಕ್ಷಣ ಕೊಡುವವರೆಗೂ ಇವರ ಸಾಧನೆ ಅಪರೂಪದ್ದು. ಹತ್ತಿರದಿಂದ ನೋಡಿದರೆ ಸ್ತ್ರೀವಾದಕ್ಕೊಂದು ಹೊಸ ಭಾಷ್ಯ ಬರೆಯುತ್ತಿದ್ದಾರೆ ಈ ಹೆಣ್ಣುಮಕ್ಕಳು. ಸಾಧಾರಣವಾಗಿ ಕಾಲೇಜಿಗೆ ಹೋಗುವ ಹೆಣ್ಣುಮಗುವಿನಿಂದ ಹಿಡಿದು ಗೃಹಿಣಿಯರನೇಕರು ಸೇರಿಕೊಂಡು ತಮ್ಮದ್ದೇ ಆದ ಆಲೋಚನೆ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಶಿವಮೊಗ್ಗದ ಭಾಗೀರಥಿ ಅಕ್ಕನಿಗೆ 60 ದಾಟಿದ್ದರೆ ಈಗ ತಾನೆ ಮೆಟ್ರಿಕ್ಯುಲೇಷನ್ ಮುಗಿಸಿರುವ ತರುಣಿಯರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಕಲ್ಯಾಣಿಯ ಸ್ವಚ್ಛತೆಯಿರಲಿ ನದಿ ನೀರಿಗಿಳಿದು ಕೊಳಕು ತೆಗೆಯುವ ಪ್ರಯತ್ನವಿರಲಿ, ಈ ಹೆಣ್ಣುಮಕ್ಕಳು ಮುಂದು. ಸಮಾಜವೂ ನಿಸ್ವಾರ್ಥವಾಗಿರುವ ಇವರ ಮಾತಿಗೆ ತಲೆದೂಗಿ ಒಪ್ಪಿಕೊಂಡುಬಿಡುತ್ತದೆ. ಬೆಂಗಳೂರು, ಶಿವಮೊಗ್ಗ, ಮೊದಲಾದ ಜಿಲ್ಲೆಗಳಲ್ಲಿ ಕಸಮುಕ್ತ ವಾಡರ್ುಗಳ ನಿಮರ್ಾಣ ಮಾಡುವ ದೃಷ್ಟಿಯಿಂದ ಮನೆ-ಮನೆಗೆ ಭೇಟಿ ನೀಡುತ್ತಿರುವ ಪ್ರತಿಷ್ಠಾನದ ಕಾರ್ಯಕತರ್ೆಯರು ಹಂತ-ಹಂತವಾಗಿ ಎಲ್ಲರನ್ನೂ ಒಲಿಸಿಕೊಳ್ಳುತ್ತಿದ್ದಾರೆ. ಇವರ ಕಾಳಜಿಯ ಪ್ರೀತಿಗೆ ಮನಸೋತು ಅನೇಕ ಶಾಲೆಬಿಟ್ಟ ಹೆಣ್ಣುಮಕ್ಕಳು ಮತ್ತೆ ಶಾಲೆಗೆ ಸೇರಿದ್ದಾರೆ. ಅವರ ತಂದೆ-ತಾಯಂದಿರು ಇವರಿಗೆ ಅದೆಷ್ಟು ಕೃತಜ್ಞರೆಂದರೆ ಶಿವಮೊಗ್ಗದ ಸ್ಲಂನಲ್ಲಿದ್ದಂತಹ ಮಕ್ಕಳನೇಕರು ಶಾಲೆಗೆ ಹೋಗುವುದಲ್ಲದೇ ಸಾಮಾನ್ಯ ಜನರು ಉಳಿದುಕೊಳ್ಳುವ ಹಾಸ್ಟೆಲ್ನಲ್ಲಿ ಇರುವುದನ್ನು ಕಲಿತಿದ್ದಾರೆ. ಅವರ ಶಿಕ್ಷಣ ಸುಧಾರಿಸಿದ್ದಲ್ಲದೇ ಜೀವನಪದ್ಧತಿಯೂ ಕೂಡ ಸಾಕಷ್ಟು ಬದಲಾಗಿದೆ. ನಾವೆಲ್ಲಾ ಮತಾಂತರದ ಕುರಿತಂತೆ ಉಗ್ರ ಭಾಷಣ ಮಾಡುತ್ತೇವಲ್ಲಾ, ಫೇಸ್ಬುಕ್, ವಾಟ್ಸಪ್ಗಳಲ್ಲಿ ಉಗ್ರ ಬರಹಗಳನ್ನು ಹಂಚಿಕೊಳ್ಳುವ ಮೂಲಕ ನಮ್ಮ ಆಕ್ರೋಶವನ್ನು ತೋರುತ್ತೇವಲ್ಲ, ಅದರ ಬದಲು ಧರ್ಮವನ್ನುಳಿಸಲು ಇಂಥದ್ದೊಂದು ಸಣ್ಣ ಕೆಲಸ ಮಾಡಿದರೆ ಸಾಕು. ಎಲ್ಲಿ ಮತಾಂತರ ನಡೆಯುತ್ತದೋ ಆ ಸ್ಥಳಗಳಲ್ಲಿ ನಮ್ಮ ಸಂಪರ್ಕದ ಕೊರತೆಯಿದೆ ಎಂದೇ ಅರ್ಥ. ಒಮ್ಮೆ ನಾವು ಅಲ್ಲಿನ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಭವಿಷ್ಯದ ಪೀಳಿಗೆಯನ್ನು ಸೆಳೆದುಕೊಂಡುಬಿಟ್ಟರೆ ಧರ್ಮ, ರಾಷ್ಟ್ರ ಎರಡರ ಉಳಿವೂ ಕೂಡ ಅಬಾಧಿತ. ಹಾಗಂತ ಇದು ಈ ಹೆಣ್ಣುಮಕ್ಕಳು ಹೊಸದಾಗಿ ಸಂಶೋಧಿಸಿದ ಕೆಲಸವಲ್ಲ. ಅಕ್ಕ ನಿವೇದಿತೆ ಮಾಡಿದ ಕೆಲಸವನ್ನೇ ಇವರು ಇಂದಿನ ದಿನಮಾನಗಳಲ್ಲಿ ಹೊಸದಾಗಿ ಜೋಡಿಸಿಕೊಂಡಿದ್ದಾರೆ ಅಷ್ಟೇ!

ಪ್ರತಿಷ್ಠಾನದ ಹೆಣ್ಣುಮಕ್ಕಳಿಗೆ ಅಧ್ಯಯನದ ಕೊರತೆಯೂ ಇಲ್ಲ. ಇತರೆ ವಾಟ್ಸಪ್ ಗ್ರೂಪುಗಳಲ್ಲಿ ಅನಗತ್ಯ ಚಚರ್ೆಗಳೇ ಹೆಚ್ಚಿದ್ದರೆ ಇವರ ಗ್ರೂಪುಗಳು ಅಧ್ಯಯನಗೈದ ವಿಚಾರದ ಕುರಿತಂತೆ ಚಚರ್ೆ ಮಾಡುತ್ತಿರುತ್ತದೆ. ಅಂದರೆ ಬೌದ್ಧಿಕವಾಗಿ ಸಮರ್ಥವಾದ, ದೈಹಿಕವಾದ ಸಕ್ಷಮವಾದ, ಮಾನಸಿಕವಾಗಿ ದೃಢವಾದ ಸಮಾಜಮುಖಿ ಹೆಣ್ಣುಮಕ್ಕಳ ತಂಡವನ್ನು ನಿವೇದಿತಾ ಪ್ರತಿಷ್ಠಾನ ಎನ್ನಬಹುದೇನೋ. ಈ ಸಂಘಟನೆಯ ಅತ್ಯಂತ ಪ್ರಮುಖವಾದ ಕೆಲಸವೇ ಸ್ವಚ್ಛಮನಸ್ಸು. ಯಾರನ್ನು ಸಮಾಜ ಉಪೇಕ್ಷಿಸಿಬಿಟ್ಟಿದೆಯೋ ಅಂಥವರ ನಡುವೆ ಹೋಗಿ ಸಂಸ್ಕಾರಯುತ ಚಟುವಟಿಕಗಳನ್ನು ನಡೆಸುವ ಪ್ರಯತ್ನ ಮಾಡುತ್ತಾರಲ್ಲಾ ಅದು ಎಲ್ಲರ ಮನಸೆಳೆಯುವಂಥದ್ದು. ಅನೇಕ ಜಿಲ್ಲೆಗಳಲ್ಲಿ ಅಂಥ ಸ್ಥಳಗಳಿಗೆ ವಾರಾಂತ್ಯದಲ್ಲಿ ಹೋಗುವ ಕಾರ್ಯಕತರ್ೆಯರು ಅಲ್ಲಿನ ಮಕ್ಕಳಿಗೆ ಶ್ಲೋಕ, ಪುರಾಣ ಕಥೆಗಳು, ಭಗವದ್ಗೀತೆಗಳನ್ನೆಲ್ಲಾ ಹೇಳಿಕೊಡುವುದಲ್ಲದೇ ಬದುಕಿನ ಸವಾಲುಗಳನ್ನೆದುರಿಸುವ ಮಾರ್ಗಗಳ ಕುರಿತಂತೆಯೂ ಪ್ರೇರಣೆ ಕೊಡುತ್ತಾರೆ. ಬದಲಾವಣೆ ಹೇಗೆ ಬಂದಿದೆ ಎಂದರೆ ಮೊದಲೆಲ್ಲಾ ಈ ಕಾರ್ಯಕತರ್ೆಯರು ಹೋಗುವಾಗ ಮರದ ಮೇಲೋ, ಮನೆಯ ತಾರಸಿಯ ಮೇಲೋ ಕುಳಿತಿರುತ್ತಿದ್ದ ಮಕ್ಕಳು ಈಗ ಎದುರಿಗೆ ಬಂದು ಕೂರುತ್ತಾರೆ, ಹೇಳಿಕೊಟ್ಟದ್ದನ್ನು ಹೇಳುತ್ತಾರೆ, ಕೊನೆಗೆ ತಂತಮ್ಮ ಮನೆಗಳಲ್ಲಿ ಹಬ್ಬ-ಹರಿದಿನಗಳನ್ನೂ ಆಚರಿಸುತ್ತಾರೆ. ಈ ಬಾರಿಯ ಚೌತಿಯಂತೂ ಇವರು ಹೋಗುವ ಭಾಗದ ಮನೆ-ಮನೆಗಳಲ್ಲೂ ಆಚರಿಸಲ್ಪಟ್ಟಿತ್ತು. ಮಣ್ಣಿನ ಗಣೇಶ ಮಾಡುವುದನ್ನು ಕಲಿತ ಮಕ್ಕಳು ಮನೆ-ಮನೆಗಳಲ್ಲಿ ಅದನ್ನಿಟ್ಟು ಪೂಜಿಸಿ ಈ ಅಕ್ಕಂದಿರನ್ನೂ ಆಹ್ವಾನಿಸಿ ಪ್ರಸಾದ ಕೊಟ್ಟು ಕಳಿಸಿದ್ದನ್ನು ಅವರ್ಯಾರೂ ಮರೆಯುವುದೇ ಇಲ್ಲ.

 

ಹಾಗಂತ ಇಷ್ಟೇ ಅಲ್ಲ, ಯುವಾಬ್ರಿಗೇಡು ಗ್ರಾಮಸ್ವರ್ಗದ ಅಡಿಯಲ್ಲಿ ದೊಡ್ಡಾನೆಯೆಂಬ ಹಳ್ಳಿಯನ್ನು ಸ್ವರ್ಗವಾಗಿಸುವ ಸವಾಲು ಸ್ವೀಕರಿಸಿದಾಗ ಅಲ್ಲಿನ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತರುವ ಕಲ್ಪನೆಗೆ ಇಂಬುಕೊಟ್ಟಿದ್ದು ಪ್ರತಿಷ್ಠಾನವೇ. ಅಲ್ಲಿನ ಕಾರ್ಯಕತರ್ೆಯೊಬ್ಬರು ಆ ಹಳ್ಳಿಗೆ ಹೋಗಿ ನೆಲೆನಿಂತು, ಅಲ್ಲಿನ ಮಕ್ಕಳಲ್ಲಿ ಶಿಕ್ಷಣದ ಹೊಸ ಕಲ್ಪನೆಯನ್ನು ಬಿತ್ತಿದರು!

ಸಮಾಜದಲ್ಲಿ ಬದಲಾವಣೆಗಳನ್ನು ಸೂಕ್ಷ್ಮವಾಗಿಯೇ ತರಬಹುದು. ಎಲ್ಲದಕ್ಕೂ ಗೌಜು-ಗದ್ದಲ ಮಾಡಬೇಕೆಂದಿಲ್ಲ. ಪ್ರತಿಷ್ಠಾನದ ಕಾರ್ಯಕತರ್ೆಯರು ಕಳೆದೆರಡು ವರ್ಷಗಳಿಂದ ಸೀತಾನವಮಿಯನ್ನು ಆಚರಿಸಿಕೊಡು ಬರುತ್ತಿದ್ದಾರೆ. ಸೀತೆ ಹುಟ್ಟಿದ ದಿನವನ್ನು ಅವರು ಗಭರ್ಿಣಿಯರೊಂದಿಗೆ ಆಚರಿಸುತ್ತಾರೆ. ಅವರಿಗೆ ಮಾತೃತ್ವದ ಪರಿಕಲ್ಪನೆಯನ್ನು ಮತ್ತೆ ತುಂಬಿ ಮಗು ಗರ್ಭದಲ್ಲಿರುವಾಗ ತಂದೆ-ತಾಯಂದಿರು ನಡೆದುಕೊಳ್ಳಬಹುದಾದ ರೀತಿಯ ಕುರಿತಂತೆ ಸೂಕ್ಷ್ಮವಾಗಿ ತಿಳಿಹೇಳುತ್ತಾರೆ. ಉಡಿತುಂಬಿ ಅಕ್ಷರಶಃ ಸೀಮಂತವನ್ನೇ ಆಚರಿಸುತ್ತಾರೆ. ಅನೇಕ ಬಡಹೆಣ್ಣುಮಕ್ಕಳಿಗೆ ಸೀಮಂತದ ಪರಿಕಲ್ಪನೆಯೇ ಇಲ್ಲ, ಅಂಥವರಿಗೆಲ್ಲಾ ಪ್ರತಿಷ್ಠಾನದ ಈ ಕಾರ್ಯ ಮನಮುಟ್ಟುವಂಥದ್ದು. ಅನೇಕರು ಬಂದು ಕಣ್ಣೀರ್ಗರೆಯುತ್ತಾ ಈ ಕಾರ್ಯಕತರ್ೆಯರನ್ನು ತಬ್ಬಿಕೊಂಡು ಹೋಗುವುದನ್ನು ಕೇಳಿದಾಗ ಕಣ್ಣಾಲಿಗಳು ತುಂಬಿಬರುತ್ತವೆ. ಕಾರ್ಯಕತರ್ೆಯರು ಭಾವನಾತ್ಮಕವಾದ ಈ ಕಾರ್ಯಗಳಲ್ಲಿ ಜೋಡಿಸಿಕೊಂಡಷ್ಟೇ ಸಲೀಸಾಗಿ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ಅವರು ಮಾಡಿದ ವೀರನಾರಿ ಧೀರತಿಲಕ ಕಾರ್ಯಕ್ರಮ ಪೋಲೀಸ್ ಕ್ವಾಟ್ರ್ರಸ್ಗಳಲ್ಲಿ ಪೊಲೀಸರ ಹೆಂಡತಿಯರಿಗೆ ಸನ್ಮಾನ ಮಾಡುವಂಥದ್ದಾಗಿತ್ತು. ಅನೇಕ ಕಡೆಗಳಲ್ಲಿ ಹೆಣ್ಣುಮಕ್ಕಳು ಕಾರ್ಯಕ್ರಮಕ್ಕೆ ಬರುವುದಕ್ಕೆ ಒಪ್ಪಿಕೊಳ್ಳಲೇ ಇಲ್ಲ. ಮೇಲಧಿಕಾರಿಗಳ ಹೆಂಡತಿಯರು ಅವರ ಮುಂದೆ ಕೂರುವುದನ್ನು ಸಹಿಸಲಾರರು. ಇದು ಮುಂದೆ ತಮ್ಮ ಗಂಡಂದಿರನ್ನು ಸಂಕಟಕ್ಕೆ ದೂಡಬಲ್ಲದೆಂಬ ಅಸಹಾಯಕತೆಯನ್ನು ಅವರು ವ್ಯಕ್ತಪಡಿಸಿದ್ದರು. ಇಷ್ಟರ ನಡುವೆಯೂ ಸೇರಿದ ಅನೇಕ ತಾಯಂದಿರು ತಮ್ಮ ದುಃಖವನ್ನು ತೋಡಿಕೊಂಡಾಗ ಕೇಳುವವರ ಹೃದಯಗಳು ಭಾರವಾಗಿಬಿಟ್ಟಿತ್ತು. ಅನೇಕರಿಗೆ ಅದು ಸವಾಲುಗಳನ್ನೆದುರಿಸುವ ಆತ್ಮವಿಶ್ವಾಸವನ್ನು ತುಂಬಿದ ಕಾರ್ಯಕ್ರಮವೂ ಹೌದು!

ಪ್ರತಿಷ್ಠಾನದ ಹೆಣ್ಣುಮಕ್ಕಳು ಆಧುನಿಕ ಸ್ತ್ರೀವಾದಿಗಳ ಕಲ್ಪನೆಗಳನ್ನೆಲ್ಲಾ ಮೆಟ್ಟಿನಿಂತು ಬಿಗ್ ಬಿಂದಿ ಚಾಲೆಂಜ್ ಸ್ವೀಕರಿಸಿದಾಗ ಅದು ವೈರಲ್ ಆಯ್ತಲ್ಲದೇ ಬಿಂದಿಯನ್ನು ಅಗಲವಾಗಿಟ್ಟುಕೊಳ್ಳುವುದು ಅವಮಾನದ ಸಂಕೇತವೋ ಪುರುಷರಿಗೆ ಅಡಿಯಾಳಾಗಿರುವ ಸಂಕೇತವೋ ಅಲ್ಲ ಎಂಬುದನ್ನು ಧೈರ್ಯವಾಗಿ ಪ್ರತಿಬಿಂಬಿಸಿದರು. ಇವೆಲ್ಲಾ ಆಲೋಚನೆಗಳನ್ನು ಈ ಹೆಣ್ಣುಮಕ್ಕಳೇ ಮಾಡುತ್ತಾರಲ್ಲದೇ ಅದಕ್ಕೆ ಬೇಕಾಗಿರುವ ಯೋಜನೆಗಳನ್ನು ಅವರೇ ರೂಪಿಸುತ್ತಾರೆ. ಇಡಿಯ ತಂಡವನ್ನು ಮುನ್ನಡೆಸುವ ರಾಜ್ಯ ಸಂಚಾಲಕಿ ಶ್ವೇತಕ್ಕ ತುಂಬು ಯೌವ್ವನದ ಕಾಲದಲ್ಲಿ ಅಪಘಾತಕ್ಕೊಳಗಾಗಿ ಎರಡೂ ಕಾಲು ಕಳೆದುಕೊಂಡವರು. ಅವರ ಉತ್ಸಾಹ, ಕಾರ್ಯಕ್ಷಮತೆ ಎಂಥವರನ್ನೂ ನಾಚಿಸುವಂಥದ್ದು. ದೈಹಿಕ ನೋವನ್ನು ಆಕೆ ಬದಿಗಿಟ್ಟು ಕಾರ್ಯಕತರ್ೆಯರ ಒಳಿತಿಗೋಸ್ಕರ ಮತ್ತು ನಂಬಿಕೊಂಡ ನಿವೇದಿತೆಯ ಆದರ್ಶವನ್ನು ಸಮಾಜದಲ್ಲಿ ಹಬ್ಬಿಸಲೆಂದು ಪ್ರವಾಸ ಮಾಡುತ್ತಾರೆ. ಎಲ್ಲರಿಗೂ ಸ್ಫೂತರ್ಿಯ ಸೆಲೆಯಾಗಿ ನಿಲ್ಲುತ್ತಾರೆ.

ಅಕ್ಕ ನಿವೇದಿತೆಯ ಆದರ್ಶಗಳನ್ನು ಮೈಗೂಡಿಸಿಕೊಂಡ ಹೆಣ್ಣುಮಕ್ಕಳ ಸಂಸ್ಥೆಯೊಂದು ಸದ್ದಿಲ್ಲದೇ ಸಮಾಜದ ಒಳಿತಿಗಾಗಿ ದುಡಿಯುತ್ತಿರುವ ಪರಿ ಅನನ್ಯವಾದ್ದು. ಅದೇ ಉತ್ಸಾಹ, ಆತ್ಮವಿಶ್ವಾಸ ನಿಮಗೂ ಇದ್ದಲ್ಲಿ ನೀವೂ ಅವರೊಂದಿಗೆ ಸೇರಿಕೊಳ್ಳಿ. ಹೊಸ ರಾಷ್ಟ್ರದ ನಿಮರ್ಾಣಕ್ಕೆ ನಮ್ಮೆಲ್ಲರ ಮೊದಲ ಹೆಜ್ಜೆಯಿದು.