On Ground

ಜಲಪ್ರವಾಹ ಯುವಾಸಹಾಯಕ್ಕೆ ಕೈಜೋಡಿಸಿದ ಪ್ರತಿಷ್ಠಾನದ ಸೋದರಿಯರು!

ಉತ್ತರ ಕರ್ನಾಟಕದ ನೆರೆ ಪ್ರವಾಹದ ಭೀಕರತೆಗೆ ಅಲ್ಲಿಯ ಜನ ತತ್ತರಿಸಿ ಹೋಗಿದ್ದಾರೆ. ವರುಣನ ಅಬ್ಬರಕ್ಕೆ ಅಲ್ಲಿಯ ಹಳ್ಳಿಗಳು ಭಾಗಶಃ ಮುಳುಗಿ ಹೋಗಿವೆ..ಇಂತಹ ಸ್ಥಿತಿಯಲ್ಲಿ ಅವರು ಮತ್ತೊಮ್ಮೆ ತಮ್ಮ ಬದುಕು ಕಟ್ಟಿಕೊಳ್ಳಲು ಅವರಿಗೆ ನೆರವಾಗುವ ಜೊತೆಗೆ ಸಾಂತ್ವನದ ಹೆಗಲು ಬೇಕು.. ಈ ನಿಟ್ಟಿನಲ್ಲಿ ಗೋಕಾಕ ತಾಲೂಕಿನ ಹಳ್ಳಿಗಳಲ್ಲಿ ನಮ್ಮ ಯುವಾ ಬ್ರಿಗೇಡ್ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನವು ಪಾಲ್ಗೊಂಡಿತ್ತು.
ಕರ್ನಾಟಕದಾದ್ಯಂತ ಹಲವು ಸೋದರಿಯರು ಈ #ಯುವಾ_ಸಹಾಯ ಕ್ಕೆ ಕೈ ಜೋಡಿಸಿ ಯಶಸ್ವಿಗೊಳಿಸಿದರು.

ಮೊದಲ ದಿನ ನಾವು ಗೋಕಾಕ‌ ಸಮೀಪದ ಚಿಗಡೊಳ್ಳಿ ಗ್ರಾಮಕ್ಕೆ ಹೋಗಿದ್ದೆವು..ಅಲ್ಲಿಯ ಜನ ಜೀವನ ನಿಜಕ್ಕೂ ನೆರೆಯ ಭೀಕರತೆಗೆ ಸಾಕ್ಷಿಯಾಗಿತ್ತು..ಇನ್ನು ಅಲ್ಲಿಯ ಸರ್ಕಾರಿ ಶಾಲೆಯೂ ಸಂಪೂರ್ಣವಾಗಿ ಮುಳುಗಿ‌ ಹೋಗಿ ಶಾಲೆಯ ಪುಸ್ತಕಗಳು ಹಾಗು ದಾಖಲೆಗಳು ನೀರಿಗೆ ಆಹುತಿಯಾಗಿದ್ದವು..ಈ ಶಾಲೆಯ ಸ್ವಚ್ಛತೆ ನಮ್ಮ ಮೊದಲ ದಿನದ ಕೆಲಸವಾಗಿತ್ತು…ನಾವು ಕೆಲಸಕ್ಕೆ ಕೈ ಹಾಕಿದಾಗ ಇದು ನಿಜವಾಗಲು ಸಾಧ್ಯವೇ ಎನಿಸಿ ಬಿಟ್ಟಿತ್ತು ಆದರೆ ಸೋದರಿಯರ ಹುಮ್ಮಸ್ಸು ಕೆಲಸದ ಸಾಮರ್ಥ್ಯದ ಮೇಲಿನ ನಂಬಿಕೆ ಇದನ್ನ ಸಾಧ್ಯವಾಗುವಂತೆ ಮಾಡಿತು…..ನಮ್ಮ ಕೆಲಸವನ್ನು ನೋಡಿದ ಅಲ್ಲಿಯ ಕೆಲ ಯುವಕರು ಕೂಡ ನಮ್ಮ ಜೊತೆ ಕೈ ಸೇರಿಸಿದರು.

ಸ್ವಚ್ಛತೆ ಒಂದು ಭಾಗವಾದರೆ ಅಲ್ಲಿಯ ನಿರಾಶ್ರಿತರಿಗೆ ಅಗತ್ಯ ಸಾಮಗ್ರಿಯನ್ನು ಒದಗಿಸುವುದು ನಮ್ಮ‌ಬಹು ದೊಡ್ಡ ಜವಾಬ್ದಾರಿಯಾಗಿತ್ತು….ರಾಶಿ ರಾಶಿ ಸಾಮಗ್ರಿಗಳು ನಮ್ಮ‌ಮುಂದೆ ಇತ್ತು ಅವುಗಳನ್ನ‌ ವಿಂಗಡಿಸಿ ಒಂದೊಂದು ಕಿಟ್ ಗಳನ್ನ‌ ಮಾಡಿ ಎಲ್ಲರುಗೂ ಒದಗಿಸುವದು ದೊಡ್ಡ ಕೆಲಸವಾಗಿತ್ತು…..ಬೆಳಿಗ್ಗೆ ೬ ಗಂಟೆಯಿಂದ ಶುರುವಾದ ಈ ಕೆಲಸ ಸಂಜೆ ಸರಿಸುಮಾರು ೫ ಗಂಟೆಗೆ ಮುಕ್ತಾಯವಾಯಿತು…ಇಲ್ಲಿಯೂ ಕೂಡ ಸಹೋದರಿಯರು ಬಹು ಉತ್ಸಾಹದಿಂದ ಕೆಲಸವನ್ನ ನಿರ್ವಹಿಸಿದರು…ಸಂಜೆ ಅಷ್ಟರಲ್ಲಿ ನಾವು ೧೫೦೦ ಕಿಟ್ ಗಳನ್ನ ರೆಡಿ ಮಾಡಿ ಇಟ್ಟಿದ್ದೆವು…
ಪ್ರತಿಯೊಬ್ಬರಿಗೂ ಕಿಟ್ ಒದಗಿಸುವ ನಿಟ್ಟಿನಲ್ಲಿ ಮನೆಗೊಂದು ಕೂಪನ್ ಗಳನ್ನ ಬರೆದು
ಮೂರನೆ ದಿನ‌ ಕಿಟ್ ಗಳನ್ನ ಜನರಿಗೆ ಒದಗಿಸುವ ಕೆಲಸಕ್ಕೂ ನಾವು ಕೈ ಜೋಡಿಸಿದೆವು.

ಒಟ್ಟಿನಲ್ಲಿ‌ ಈ ಮೂರು ದಿನದ ಕೆಲಸವು ಯಶಸ್ವಿಯಾಗಿ ಸಾಗಲು ಎಲ್ಲ ಸೋದರಿಯರ ಸಹಕಾರ ಅದ್ಭುತವಾಗಿತ್ತು. ಇನ್ನು ನಮ್ಮ ಕೆಲಸವನ್ನ ಗಮನಿಸಿದ ಅನೇಕ‌ ಸಹೋದರಿಯರು ಕೂಡ ನಿವೇದಿತಾ ಪ್ರತಿಷ್ಠಾನವನ್ನು ಸೇರುವ ಆಸೆಯನ್ನು ಕೂಡ ವ್ಯಕ್ತಪಡಿಸಿದರು.
ಯುವಾ ಬ್ರಿಗೇಡ್ ಸೋದರರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಲಾಯಿತು.