On Ground

ನಿವೇದಿತಾ ಜಯಂತಿ – ಪೋಸ್ಟ್ ಕಾರ್ಡ್ ಅಭಿಯಾನ.

ಅಕ್ಟೋಬರ್ 28
ಅಕ್ಕ ನಿವೇದಿತಾ ಜಯಂತಿ
ಶುಭಾಶಯವನ್ನು

ಅಕ್ಟೋಬರ್ 28 ಸೋದರಿ ನಿವೇದಿತಾ ಜಯಂತಿ. ಪ್ರತಿ ವರ್ಷವೂ
ಶಾಲಾ, ಕಾಲೇಜು ಮಕ್ಕಳೊಂದಿಗೆ ಸೇರಿದಂತೆ
ಭಿನ್ನ ಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿತ್ತು. ನಮಗೆ ಇಂದಿನ ಡಿಜಿಟಲ್ ಯುಗದಲ್ಲಿ ಪತ್ರ ಬರೆಯುವ ಹವ್ಯಾಸ ಕಡಿಮೆ ಆಗಿರುವುದರಿಂದ ಮತ್ತೊಮ್ಮೆ ಪತ್ರ ಬರೆಯುವ ಹವ್ಯಾಸ ನೆನಪಿಸುವ ಮತ್ತು ಅಕ್ಕನ ಸಂದೇಶವನ್ನು ಈ ಮೂಲಕ ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ, ಈ ಬಾರಿ ಎಲ್ಲರಿಗೂ ಪೋಸ್ಟ್ ಕಾರ್ಡ್ ಮೂಲಕ ನಿವೇದಿತಾ ಜಯಂತಿ ಶುಭಾಶಯ ಕೋರಿ ವಿಶಿಷ್ಟವಾಗಿ ಆಚರಿಸಲಾಯಿತು. ಸುಮಾರು 800ಕ್ಕೂ ಹೆಚ್ಚು ಜನರಿಗೆ ಈ ಮೂಲಕ ಅಕ್ಕ ನಿವೇದಿತೆಯ ಸಂದೇಶಗಳನ್ನು ಒಳಗೊಂಡ ಪತ್ರ ಬರೆದು ತಲುಪಿಸಲಾಯಿತು.