On Ground

ಸಾವಿತ್ರಿಬಾಯಿ ಫುಲೆ ಜನ್ಮದಿನ ಅಂಗವಾಗಿ ಆರೋಗ್ಯ ತಪಾಸಣೆ ಶಿಬಿರ

ಸೋದರಿ ನಿವೇದಿತಾ ಪ್ರತಿಷ್ಠಾನದ ಶಿವಮೊಗ್ಗ ಸೋದರಿಯರು ಸಹ್ಯಾದ್ರಿ ಕಾಲೇಜು ಬಳಿಯಿರುವ ಟೆಂಟ್‌ಗಳಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿ, ಮಹಿಳೆಯರಿಗೆ ಮತ್ತು ಮಕ್ಕಳಿಗೆಂದೇ ವಿಶೇಷವಾಗಿ ಆರೋಗ್ಯ ತಪಾಸಣೆಯನ್ನು ಆಯೋಜಿಸಿತ್ತು. ಸುಮಾರು 50 ಮಹಿಳೆಯರು ಮತ್ತು 60ಕ್ಕೂ ಹೆಚ್ಚು ಮಕ್ಕಳು ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಸುಮಾರು ಮೂರು ವರ್ಷಗಳಿಂದ ಟೆಂಟ್ ಜನರೊಡನೆ ಒಡನಾಟವಿದ್ದುದರಿಂದ, ಅಲ್ಲಿ ಜನರು ನೀಡಿದ ಸಹಕಾರವು ಮತ್ತಷ್ಟು ಕೆಲಸ ಮಾಡಲು ಖಂಡಿತ ಪ್ರೇರಣೆ ನೀಡಿದೆ.

ಶಿಬಿರಕ್ಕೆ ಪ್ರತಿಷ್ಠಾನದ ಮಾರ್ಗದರ್ಶಕರಾದ ಚಕ್ರವರ್ತಿ ಅಣ್ಣ ಬಂದು, ಜನರೊಡನೆ ಸ್ವಚ್ಛತೆಯ ಕುರಿತು ಮಾತನಾಡಿದರು.

ಶಿವಮೊಗ್ಗದ ಸದ್ಗುರು ಚಿಕಿತ್ಸಾಲಯದ ಆಯುರ್ವೇದ ವೈದ್ಯೆಯರಾದ ಶ್ರೀಮತಿ ರಂಜನಿ, ಶ್ರೀಮತಿ ಮೈಥಿಲಿ, ಶ್ರೀಮತಿ ಪ್ರಕೃತಿ ಮತ್ತು ಆಯುರ್ವೇದ ವಿದ್ಯಾರ್ಥಿನಿ ವಿಜೇತ ಅವರು ಪ್ರತಿಷ್ಠಾನದ ಜೊತೆ ಕೈಜೋಡಿಸಿ ಆರೋಗ್ಯ ತಪಾಸಣೆಯನ್ನು ಯಶಸ್ವಿಯಾಗಿ ನಡೆಸಿದರು.

ವಿವಿಧ ಜಿಲ್ಲೆಗಳಲ್ಲಿ ಶಿಕ್ಷಣದ ಅರಿವು ಮೂಡಿಸುವ ಪ್ರಯತ್ನ ಹಾಗೂ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಯಿತು.