Uncategorized

ಸೀತಾ ನವಮಿ – ಶಿವಮೊಗ್ಗ

13.05.2019
ಸೋದರಿ ನಿವೇದಿತಾ ಪ್ರತಿಷ್ಠಾನ ಶಿವಮೊಗ್ಗ

#ಸೀತಾ_ನವಮಿ

ಗರ್ಭಿಣಿಯರಿಗೆ ಎರಡು ದಿನದ ‘ಸಂಸ್ಕಾರವರ್ಗ’ ಶಿಬಿರವು ಶಿವಮೊಗ್ಗದ ಚಿಕ್ಕಮರಡಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಮತಿ ರುಕ್ಮಿಣಿ ನಾಯಕ್ ಅವರು ಶಿಶುವನ್ನು ಗರ್ಭದಲ್ಲಿರುವಾಗ ಹೇಗೆ ನೀಡಿಕೊಳ್ಳಬೇಕು, ಅದಕ್ಕೆ ದೈಹಿಕವಾಗಿ ಆಹಾರ ತಾಯಿಯ ಮೂಲಕ ಲಭ್ಯವಾಗಿ ಸಾಧ್ಯವಾಗುತ್ತದೋ ಅದೇ ರೀತಿ ತಾಯಿಯ ಮನಸ್ಥಿತಿ, ಸುತ್ತಲಿನ ವಾತಾವರಣ ಕೂಡ ಗರ್ಭಸ್ಥ ಶಿಶುವಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಧ್ರುವ, ಪ್ರಹ್ಲಾದ ಹಾಗೂ ಅಭಿಮನ್ಯುವಿನ ಕಥೆಗಳ ದೃಷ್ಟಾಂತಗಳ ಮೂಲಕ ಹೇಳಿದರು. ಸತ್ಸಂಗ, ಸದ್ಭಾವನೆಗಳಿಂದ ಕೂಡಿದ ಗರ್ಭಿಣಿಯ ಮಾನಸಿಕ ಸ್ಥಿತಿ ಹಾಗೂ ಒಳ್ಳೆಯ ಪೌಷ್ಟಿಕ ಸಾತ್ವಿಕ ಆಹಾರದಿಂದ ದೊರೆತ ದೈಹಿಕ ಆರೋಗ್ಯದಿಂದ ಸಮಾಜಕ್ಕೆ ಆರೋಗ್ಯವಂತ ಪೀಳಿಗೆ ನೀಡುವಂತೆ ತಿಳುವಳಿಕೆ ನೀಡಿದರು.

ಗರ್ಭಿಣಿಯರ ಆರೋಗ್ಯದ ಬಗ್ಗೆ, ಮಗುವಿನ ಬೆಳವಣಿಗೆ ಹೇಗೆ ನವಮಾಸಗಳಲ್ಲಿ ರೂಪುಗೊಳ್ಳುತ್ತದೆ, ಯಾವ ತಿಂಗಳಲ್ಲಿ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಆರೈಕೆ ಹಾಗೂ ಶಿಶು ಹುಟ್ಟಿದ ನಂತರ ಅದನ್ನು ಪೋಷಿಸುವ ಎಲ್ಲಾ ಮಾಹಿತಿಯನ್ನು ಆಯುರ್ವೇದ ವೈದ್ಯ ರಾದ ಡಾ. ರಂಜನಿಯವರು ನೀಡಿದರು. ಕೆಲವು ಮಹಿಳೆಯರು ತಮಗೆ ಇದನ್ನೆಲ್ಲ ತಿಳಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು. ಅವರಿಗೆ ನೀವು ಮನೆಯ ಹಿರಿಯರು ಕಿರಿಯರಿಗೆ ತಾಳ್ಮೆಯಿಂದ ಮಾರ್ಗದರ್ಶನ ನೀಡಿ ಎಂದು ಹೇಳಿದೆವು.

ಎರಡನೆಯ ದಿನ ಸಾಂಪ್ರದಾಯಿಕವಾಗಿ ಸೀಮಂತವನ್ನು ನೆರವೇರಿಸಲಾಯಿತು. ಅತಿಥಿಗಳಾಗಿ ಬಂದಿದ್ದ ದಾದಿ (nurse) ಒಬ್ಬರು ಗರ್ಭಿಣಿಯರಿಗೆ ಆರೋಗ್ಯದ ಕುರಿತು ಮಗುವಿನ ಕುರಿತು ಹಾಗೂ ಮಕ್ಕಳ ನಡುವಣ ಅಂತರದಿಂದ ಆಗುವ ಪ್ರಯೋಜನ ಗಳ ಬಗ್ಗೆ ತಿಳಿಸಿದರು.
ವಿಶೇಷವಾಗಿ ಎಲ್ಲಾ ಗರ್ಭಿಣಿಯರು ಸೀಮಂತಕ್ಕೆ ಆಸ್ಥೆಯಿಂದ ಅಲಂಕಾರ ಮಾಡಿಕೊಂಡು, ರೇಷ್ಮೆ ಸೀರೆಯುಟ್ಟು ಸಂಭ್ರಮದಿಂದ ಬಂದರೆ, ಕೆಲವರು ತಮ್ಮ ಪತಿಯರನ್ನು ಕರೆತಂದಿದ್ದು ವಿಶೇಷವಾಗಿತ್ತು. ಅವರಿಗೂ ಸಹ ಮನೆಯಲ್ಲಿ ತಮ್ಮ ಪತ್ನಿಯರ ಕುರಿತು ವಹಿಸಬೇಕಾದ ಕಾಳಜಿಯ ಬಗ್ಗೆ ಹೇಳಲಾಯಿತು.
ಎಲ್ಲರಿಗೂ ಅರಿಸಿನ ಕುಂಕುಮ, ಸಿಹಿ ತಿಂಡಿಗಳು ಹಾಗೂ ಹಣ್ಣುಗಳನ್ನು ಕೊಟ್ಟು ಮಡಿಲು ತುಂಬಿ ಆರತಿ ಮಾಡಿದಾಗ ಮನಸ್ಸು ತುಂಬಿ ಬಂತು.
ನಂತರ ಸಿಹಿಯೊಂದಿಗೆ
ಎಲ್ಲರೂ ಸಂತೋಷದಿಂದ ಮನೆಗೆ ಹೊರಟಾಗ ಮನಸಿಗೆ ಸಾರ್ಥಕತೆಯ ಭಾವ.
ಬೇರೆ ಹಳ್ಳಿಗಳಿಂದ ಕಾರ್ಯಕ್ರಮಕ್ಕೆ ಬಂದಿದ್ದ ಆಶಾ ಕಾರ್ಯಕರ್ತೆಯರು ನಮ್ಮನ್ನು ಅವರ ಊರಲ್ಲೂ ಈ ರೀತಿಯ ಕಾರ್ಯಕ್ರಮವನ್ನು ನಡೆಸಿಕೊಡಲು ಆಹ್ವಾನಿಸಿದಾಗ ಅವರಿಗೂ ಸಹ ನಾವು ನಿವೇದಿತಾ ಪ್ರತಿಷ್ಠಾನದ ಧ್ಯೇಯ ಉದ್ದೇಶಗಳನ್ನು ತಿಳಿಸಿದೆವು. ಅಕ್ಕ ನಿವೇದಿತಾ ಳ’ ತುಕ್ಕು ಹಿಡಿಯು……’ಈ ವಾಕ್ಯದ ಅರ್ಥವನ್ನು ಅವರು ಕೇಳಿ ತಿಳಿದುಕೊಂಡರು. ಹಾಗೂ ತಾವೂ ಈ ದಿಶೆಯಲ್ಲಿ ಕೆಲಸ ಮಾಡಲು ಪ್ರೇರೇಪಿತರಾಗಿದ್ದೇವೆ ಎಂದಾಗ ಏನೋ ಸಾಧಿಸಿದ ಹೆಮ್ಮೆ ಮನದಲ್ಲಿ ಮೂಡಿದ್ದು ಸುಳ್ಳಲ್ಲ.

#Seetha_Navami

About the author

snp vajra

Add Comment

Click here to post a comment